ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಧ್ಯಕ್ಷರಾದ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿದರು.
ಈ ವೇಳೆ ಜೈಲಿನ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ವೀರ ಸಾವರ್ಕರ್ ಪುಸ್ತಕ ಇಟ್ಟಿದ್ದಿರಾ ಎಂದು ಕೇಳಿದರು. ಈ ಬಗ್ಗೆ ಜೈಲು ಸಿಬ್ಬಂದಿಯೂ ಇಲ್ಲ ಎಂದಿದ್ದಕ್ಕೆ, ನ್ಯಾಯಮೂರ್ತಿ ಅವರು ವೀರ ಸಾವರ್ಕರ್ ಅವರ ಕುರಿತಾದ ಪುಸ್ತಕ ಇಡಲು ಸೂಚನೆ ನೀಡಿದರು.
ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಇದರ ಜೊತೆಗೆ ರಾಮಾಯಣ, ಮಹಾಭಾರತ, ಬೈಬಲ್ ಹಾಗೂ ಕುರಾನ್‍ಗಳನ್ನು ಇಡಲು ಸೂಚಿಸಿದರು. ಇದನ್ನೂ ಓದಿ: ಕಾರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್
ಇನ್ನು ಮಹಿಳಾ ಕಾರಾಗೃಹಕ್ಕೂ ಭೇಟಿ ನೀಡಿದ ನ್ಯಾಯಮೂರ್ತಿ, ಅಲ್ಲಿರುವ ಮಹಿಳಾ ಕೈದಿ ಜೊತೆ ಇರುವ ಮಗು ಬಗ್ಗೆ ವಿಚಾರಣೆ ಮಾಡಿದರು. ಮಗು ಯಾಕೆ ಇಲ್ಲಿ ಇರಬೇಕು ಎಂದು ಪ್ರಶ್ನೆ ಮಾಡಿದ ಅವರು, ಮಗುವಿಗೆ ಶಾಲೆಗೆ ಕಳಿಸುವಂತೆ ಜೈಲು ಅಧೀಕ್ಷಕರಿಗೆ ಹೇಳಿದರು. ನಂತರ ಮಗುವನ್ನು ಮಾತನಾಡಿಸಿದ ನ್ಯಾಯಮೂರ್ತಿ, ಮುಂದೆ ಏನು ಆಗ್ತಿಯಾ, ಅಮ್ಮಾ ಇಲ್ಲೆ ಇರ್ತಾರೆ, ನೀನು ಚೆನ್ನಾಗಿ ಓದು ಎಂದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?