ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಫೋಟ – ಮೂರೇ ದಿನಕ್ಕೆ 12 ಲಕ್ಷ ಮಂದಿಗೆ ಸೋಂಕು

Public TV
1 Min Read
kim jong un

ಸಿಯೋಲ್: ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಫೋಟಿಸಿದೆ. ಕಳೆದ ಮೂರು ದಿನಗಳ ಅವಧಿಯಲ್ಲೇ 10 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದಕ್ಕೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಔಷಧ ವಿತರಿಸಲು ಸಹಾಯ ಮಾಡುವಂತೆ ಸೈನ್ಯಕ್ಕೆ ಆದೇಶಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ- ಉತ್ತರ ಕೊರಿಯಾದಲ್ಲಿ 21 ಸಾವು

cold chain covid 19 corona 400x240 1

ಲಸಿಕೆ ಹಾಕಿಸಿಕೊಳ್ಳದ ಜನರಿಂದ ಕೊರೊನಾ ಸೋಂಕು ವೇಗವಾಗಿ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಘೋಷಿಸಲಾಗಿದೆ. ಆದರೂ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ದೇಶದಲ್ಲಿ ಔಷಧಗಳನ್ನು ವಿತರಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಔಷಧ ವಿತರಣೆಯಲ್ಲಿ ನೆರವಾಗುವಂತೆ ಸೇನೆಗೆ ಕಿಮ್‌ ಆದೇಶ ಹೊರಡಿಸಿದ್ದಾರೆ. ಸ್ವತಃ ಔಷಧಾಲಯಗಳಿಗೆ ಭೇಟಿ ನೀಡಿ ದಾಸ್ತಾನು ಹಾಗೂ ವಿತರಣೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಂಗೆಟ್ಟ ಶ್ರೀಲಂಕಾಕ್ಕೆ ಎಲ್‌ಟಿಟಿಇ ದಾಳಿಯ ಭೀತಿ – ಹೈ ಅಲರ್ಟ್

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹರಡುತ್ತಿದ್ದು, ಮೇ 15ರ ವೇಳೆಗೆ ಸೋಂಕಿನಿಂದಾಗಿ 50 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 12,13,550 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ಶೇ. 50 ಮಂದಿ ಮಾತ್ರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *