ಕಮಲ್ ಹಾಸನ್ ಸಿನಿಮಾದ ಹಾಡಿನಲ್ಲಿ ಕೇಂದ್ರ ಸರಕಾರ ಅಣಕ : ದೂರು ದಾಖಲು

Public TV
2 Min Read
kamal haasan vikram film 1

ಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾದ ಹಾಡು ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲೇ ಈ ಹಾಡು ಸಾಕಷ್ಟು ಸದ್ದು ಮಾಡಿತ್ತು. ‘ಪಾತಾಳ.. ಪಾತಾಳ’ ಎಂಬ ಸಾಹಿತ್ಯದಿಂದ ಶುರುವಾಗುವ ಈ ಗೀತೆಗೆ ಕಂಟಕ ಎದುರಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರಕಾರವನ್ನು ಅಣಕ ಮಾಡಲಾಗಿದೆ ಎಂಬ ಕಾರಣಕ್ಕಾಗಿ ದೂರು ದಾಖಲಾಗಿದೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

kamal haasan vikram film 2

ಈ ಹಾಡನ್ನು ಸ್ವತಃ ಕಮಲ್ ಹಾಸನ್ ಅವರೇ ಬರೆದಿರುವುದರಿಂದ ಉರಿವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ. ಅಷ್ಟಕ್ಕೂ ಈ ಹಾಡಿನಲ್ಲಿ ಏನಿದೆ ಎಂದರೆ, ಕೇಂದ್ರ ಸರಕಾರ ಯೋಜನೆ ಮತ್ತು ಕೋವಿಡ್ ನಿಧಿ ಸಂಗ್ರಹದ ಕುರಿತಾಗಿ ನಕಾರಾತ್ಮಕ ಸಾಲುಗಳನ್ನು ಬರೆಯಲಾಗಿದೆ ಎನ್ನುವುದು ಈ ಹಾಡಿನ ಮೇಲಿರುವ ಆರೋಪ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

kamal haasan vikram film 3

ಖಜಾನೆ ಖಾಲಿ ಖಾಲಿ, ಖಜಾನೆಯಲ್ಲಿ ಹಣವೇ ಇಲ್ಲ. ರೋಗಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಖಜಾನೆ ಖಾಲಿ ಖಾಲಿ. ಅಲ್ಲದೇ, ಕೀ ಕಳ್ಳನ ಬಳಿ ಇದೆ ಎಂದು ಅರ್ಥ ಬರುವ ಸಾಲುಗಳನ್ನು ಹಾಡಾಗಿಸಿದ್ದಾರೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅನ್ನುವವರು ಕಮಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

kamal haasan vikram film 5

ಮೇ 12 ರಂದು ಚೆನ್ನೈ ಪೊಲೀಸ್ ಕಮಿಷ್ನರ್ ಬಳಿ ದೂರು ದಾಖಲಿಸಿರುವ ಸೆಲ್ವಂ, ಪೊಲೀಸ್ ನವರು ಅಗತ್ಯ ಕ್ರಮ ತಗೆದುಕೊಳ್ಳದೇ ಇದ್ದರೆ, ತಾವು ಮದರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿಯೂ ತಿಳಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ನೋಡುಗರ ಸಂಖ್ಯೆ ಮತ್ತೆ ಹೆಚ್ಚಿದೆ. ಈಗಾಗಲೇ 15 ಮಿಲಿಯನ್ ಗೂ ಹೆಚ್ಚು ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ : ಸೀಮಂತದ ಖುಷಿಯಲ್ಲಿ ಸಂಜನಾ: ತಿಂಗಳಾಂತ್ಯಕ್ಕೆ ಮಡಿಲಿಗೆ ಮಗುವಿನ ಆಗಮನ

kamal haasan vikram film 6

ಜೂನ್ 3 ರಂದು ತೆರೆಗೆ ಬರಲಿರುವ ವಿಕ್ರಮ್ ಸಿನಿಮಾ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶ್ವರೂಪಮ್ 2 ಸಿನಿಮಾದ ನಾಲ್ಕು ವರ್ಷದ ನಂತರ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆಯಂತೂ ಹೆಚ್ಚಿದೆ.

Share This Article
Leave a Comment

Leave a Reply

Your email address will not be published. Required fields are marked *