ಹಾರರ್ ಥ್ರಿಲ್ ನೀಡಲು ದಿನೇಶ್ ಬಾಬು 50ನೇ ಚಿತ್ರ ‘ಕಸ್ತೂರಿ ಮಹಲ್’ ರೆಡಿ

Public TV
1 Min Read
kasturi mahal

ಸ್ತೂರಿ ಮಹಲ್, ಹೆಸರಾಂತ ಹಾಗೂ ಹಿರಿಯ ನಿರ್ದೇಶಕ ದಿನೇಶ್ ಬಾಬು ಸಿನಿಮಾ. ಇದು ಈ ಚಿತ್ರದ ಹೆಗ್ಗಳಿಕೆ ಕೂಡ. ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾ ಕೊಟ್ಟ ದಿನೇಶ್ ಬಾಬು ಅವರ 50ನೇ ಸಿನಿಮಾ ಎನ್ನುವುದು ಇನ್ನೊಂದು ಇಂಟ್ರಸ್ಟಿಂಗ್ ವಿಚಾರ. ಸದ್ಯ ಹಾಡು, ಟ್ರೇಲರ್‌ಗಳ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದಿರುವ ಈ ಚಿತ್ರ ಇದೇ ಶುಕ್ರವಾರ ಅಂದರೆ ಮೇ 13ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

kasturi mahal 1

ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿ ಸೂಪರ್ ಹಿಟ್ ನೀಡಿರುವ ನಿರ್ದೇಶಕ ದಿನೇಶ್ ಬಾಬು ಕನ್ನಡ ಚಿತ್ರ ಪ್ರೇಮಿಗಳಿಗೆ ಬಲು ಅಚ್ಚು ಮೆಚ್ಚು. ಪುನೀತ್ ರಾಜ್ ಕುಮಾರ್ ಅಭಿನಯದ ಅಭಿ, ರಮೇಶ್ ಅರವಿಂದ್ ಅಭಿನಯದ ಅಮೃತ ವರ್ಷಿಣಿ ಸೇರಿದಂತೆ ಇನ್ನೂ ಹಲವು ಸಿನಿಮಾಗಳು ಇದಕ್ಕೆ ಕಾರಣ. ಸದ್ಯ ತಮ್ಮ ಸಿನಿ ಜರ್ನಿಯ 50ನೇ ಸಿನಿಮಾ ಕಸ್ತೂರಿ ಮಹಲ್‍ಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿ ರಂಜಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ : ಬೆಂಗಳೂರು ರಸ್ತೆಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಖ್ಯಾತ ಗಾಯಕ ಅಜಯ್ ವಾರಿಯರ್

kasturi mahal 4

ಕಸ್ತೂರಿ ಮಹಲ್ ಹಾರರ್ ಜಾನರ್ ಸಿನಿಮಾ. ಅವನೇ ಶ್ರೀಮನ್ನಾರಾಯಣ ಖ್ಯಾತಿಯ ನಟಿ ಶಾನ್ವಿ ಶ್ರೀವಾಸ್ತವ ಚಿತ್ರದ ನಾಯಕಿ. ಈಗಾಗಲೇ ಟ್ರೇಲರ್‌ನಲ್ಲಿ ಶಾನ್ವಿ ಅವತಾರ ನೋಡಿ ಥ್ರಿಲ್ ಆಗಿರುವ ಮಂದಿ ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಸ್ಕಂದ ಅಶೋಕ್, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ರಂಗಾಯಣ ರಘು, ವತ್ಸಲಾ ಮೋಹನ್, ನೀನಾಸಂ ಅಶ್ವಥ್, ಕಾಶಿಮಾ, ಕೆಂಪೇಗೌಡ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

kasturi mahal 2

ಪಿಕೆಹೆಚ್ ದಾಸ್ ಕ್ಯಾಮೆರಾ ನಿರ್ದೇಶನ, ರಮೇಶ್ ಕೃಷ್ಣ ಸಂಗೀತ ಚಿತ್ರಕ್ಕಿದೆ. ಶ್ರೀ ಭವಾನಿ ಆರ್ಟ್ಸ್ ಬ್ಯಾನರ್ ನಡಿ ರವೀಶ್ ಆರ್.ಸಿ. ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಿರುವ ಕಸ್ತೂರಿ ಮಹಲ್ ಮೇ 13ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಇದನ್ನೂ ಓದಿ : ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶ

Share This Article
Leave a Comment

Leave a Reply

Your email address will not be published. Required fields are marked *