ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರತ್ಯೇಕ ಆಯೋಗ ರಚನೆ: ಸಿಎಂ

Public TV
2 Min Read
BASAVARAJ BOMMAI 2

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲು ನ್ಯಾಯಮೂರ್ತಿ ಭಕ್ತವತ್ಸಲ ಅವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಆಯೋಗ ರಚಿಸಲಾಗಿದೆ. ಈ ಮೂಲಕ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

CM Basavaraj Bommai

ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ದಯಾನಂದಪುರಿ ಸ್ವಾಮೀಜಿ ಅವರ 33ನೇ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ ಜನಜಾಗೃತಿ ಸಮಾವೇಶವನ್ನುದ್ದೇಶಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರತ್ಯೇಕ ಆಯೋಗ ರಚಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಅಂಶಗಳ ಆಧಾರದ ಮೇಲೆ ಸಮುದಾಯದ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಿ.ಟಿ.ರವಿಯ ಹಿಂದುತ್ವಕ್ಕೆ ಮನುಷ್ಯ ಧರ್ಮದ ಪ್ರತಿಪಾದನೆ‌ ಮೂಲಕ‌ ಸಿದ್ದರಾಮಯ್ಯ ಟಕ್ಕರ್ – ಕಾರ್ಯಕ್ರಮದಲ್ಲಿ ಏಟು ಎದಿರೇಟು

basavaraj bommai (1)

ಸಮುದಾಯ ವಿಕಾಸಕ್ಕಾಗಿ ಹಲವು ಕಾರ್ಯಕ್ರಮ: ಸಮಾಜದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಆ ಸಮುದಾಯ ವಿಕಾಸಗೊಳ್ಳುತ್ತದೆ. ಅದಕ್ಕಾಗಿಯೇ ನೇಕಾರ ಸಮ್ಮಾನ ಯೋಜನೆಯಡಿ ನೀಡಲಾಗುವ ಆರ್ಥಿಕ ನೆರವನ್ನು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಸಹಕಾರ ಬ್ಯಾಂಕ್ ಹಾಗೂ ಶೆಡ್ಯೂಲ್ ಬ್ಯಾಂಕಿನಲ್ಲಿ ಪಡೆಯುವ ಸಾಲದ ಬಡ್ಡಿದರವನ್ನು ಶೇ.8 ರಿಂದ ಶೇ.2-3ಕ್ಕೆ ಇಳಿಸಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಸಮುದಾಯದ ಮಕ್ಕಳಿಗೆ ಪಿಯುಸಿಯಿಂದ ಪದವಿ ಶಿಕ್ಷಣ ಹಂತದವರೆಗೂ ಶಿಷ್ಯ ವೇತನ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ನೇಕಾರಿಕೆಯಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಗೆ ಸರ್ಕಾರ ಸಹಕರಿಸುತ್ತದೆ. ಸಮುದಾಯದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಿದೆ. ಮಠಗಳಿಗೆ ಎಲ್ಲ ಸಹಾಯ ನೀಡಲಾಗುತ್ತದೆ. ಗಾಯತ್ರಿಪೀಠ ಮಹಾಸಂಸ್ಥಾನಕ್ಕೆ 1 ಕೋಟಿ ರೂ. ನೀಡಲಾಗಿದ್ದು, ಹೆಚ್ಚುವರಿ 4 ಕೋಟಿ ರೂ.ಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನಾನೂ ಹಿಂದೂ ಇದೀನಿ ಅಂತ ಕೊಲೆ ಮಾಡಬೇಕನ್ನೋದು ಯಾವ ನ್ಯಾಯ – ಸಚಿವ ಶಂಕರ ಪಾಟೀಲ್

BASAVARJ BOMMAI (1)

ಕಾಯಕ ನಿಷ್ಠೆ ಸಮುದಾಯದ ಗುಣಧರ್ಮ: ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಕಾಯಕ ನಿಷ್ಠೆ, ಶ್ರದ್ಧೆ ದೇವಾಂಗ ಸಮಾಜದ ಗುಣಧರ್ಮಗಳು. ಸಮುದಾಯವರು ನೇಕಾರಿಕೆ ದೈವದತ್ತವಾದ ಕಲೆ. ಈ ಕ್ಷೇತ್ರದಲ್ಲಿ ಸಾಕಷ್ಟು ಆಧುನೀಕರಣ ಬಂದಿದ್ದು, ಅದರ ನಡುವೆಯೂ ಸಮಾಜ ತನ್ನ ಕಸುಬನ್ನು ಉಳಿಸಿಕೊಂಡಿದೆ. ಜಾಗತೀಕರಣ, ಆಧುನೀಕರಣ, ಖಾಸಗೀಕರಣದ ನಡುವೆ ಅಂತ:ಕರಣವಿರಬೇಕು. ಈ ಸಮಾಜವನ್ನು ಮುನ್ನಡೆಸಲು ದಕ್ಷವಾದ ಸ್ವಾಮೀಜಿಗಳಿದ್ದಾರೆ ಎಂದು ಶ್ಲಾಘಿಸಿದ ಅವರು, ಸಮುದಾಯದ ಏಳಿಗೆಗೆ ಸಹಕರಿಸಲು ಸರ್ಕಾರ ಬದ್ಧವಾಗಿದೆ ಎಂದು ನುಡಿದರು.

Share This Article
Leave a Comment

Leave a Reply

Your email address will not be published. Required fields are marked *