ಪೂಲ್‌ನಲ್ಲಿ ಪತಿಯ ಜೊತೆ ಹಾಟ್ ಆಗಿ ಕಾಣಿಸಿಕೊಂಡ ಕತ್ರಿನಾ ಕೈಫ್

Public TV
2 Min Read
vikki kathrin

ಬಾಲಿವುಡ್ ನವದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾದ ನಂತರವೂ ಸಿನಿಮಾ ಮತ್ತು ಜಾಹೀರಾತು ಶೂಟಿಂಗ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಆಗಾಗ್ಗೆ ಅಭಿಮಾನಿಗಳಿಗೆ ತಮ್ಮ ಅಪ್ಡೇಟ್ ಕೊಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಈ ಜೋಡಿ ಒಬ್ಬರಿಗೊಬ್ಬರು ಟೈಮ್ ಕೊಡುತ್ತಾ ಲವ್ ಮೂಡ್ನಲ್ಲಿ ತೇಲುತ್ತಿದ್ದಾರೆ. ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವು ವೀಡಿಯೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಕೊನೆಗೂ ತಮ್ಮ ಕನಸು ನನಸಾಗಿದೆ ಎಂದು ತಿಳಿಸಿದ್ದರು. ಈಗ ಹಾಟ್ ಫೋಟೋ ಶೇರ್ ಮಾಡಿರುವ ಈ ಜೋಡಿ, ಬಿ’ಟೌನ್ನಲ್ಲಿ ಸುದ್ದಿಯಾಗಿದ್ದಾರೆ.

katrina kaif 1

ಮದುವೆ ನಂತರ ತಮ್ಮ ಮುದ್ದು ಫೋಟೋ ಶೇರ್ ಮಾಡಿ ದಾಂಪತ್ಯ ಜೀವನದ ಸಿಹಿ ನೆನಪುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದರು. ಕತ್ರಿನಾ ಇನ್ಸ್ಟಾಗ್ರಾಮ್ನಲ್ಲಿ ಪತಿ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದು, ‘ನಾನು ಹಾಗೂ ನನ್ನವನು’ ಎನ್ನುವ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಕತ್ರಿನಾ ಮತ್ತು ವಿಕ್ಕಿ ಪೂಲ್ನಲ್ಲಿ ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ: ಸಂದೀಪ್

 

View this post on Instagram

 

A post shared by Katrina Kaif (@katrinakaif)

ಈ ಫೋಟೋ ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದು, ಭಾರೀ ಕಾಮೆಂಟ್ ಮಾಡುತ್ತಿದ್ದಾರೆ. ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಈ ಹಾಟ್ ಜೋಡಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಕಾಮೆಂಟ್ನಲ್ಲಿ, ವಿಕ್ಕಿಗಿಂತ ಕತ್ರಿನಾ ವಯಸ್ಸಿನಲ್ಲಿ ದೊಡ್ಡವರು. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿ ಆಗಿಯೇ ಇಲ್ಲ. ಹೃತಿಕ್ ರೋಶನ್ ಅವರು ‘ಸೋ ನೈಸ್’ ಎಂದು ಕಾಮೆಂಟ್ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಕಣ್ಣಿನಲ್ಲಿ ಹಾರ್ಟ್ ಇರುವ ಎಮೋಜಿ ಪೋಸ್ಟ್ ಮಾಡಿದ್ದಾರೆ.

katrina kaif 2

ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಈ ಜೋಡಿ ಮದುವೆಯಾದರು. ಆ ಬಳಿಕ ಅವರು ಹನಿಮೂನ್ಗೂ ತೆರಳಿದ್ದು, ಇಬ್ಬರೂ ಸಿನಿಮಾದಲ್ಲಿ ಬ್ಯುಸಿ ಆದರು. ಆಗಾಗ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಾರೆ. ವೃತ್ತಿ ಜೀವನದಲ್ಲಿ ಒಬ್ಬರ ಬೆಂಬಲಕ್ಕೆ ಒಬ್ಬರು ನಿಂತಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

Share This Article
Leave a Comment

Leave a Reply

Your email address will not be published. Required fields are marked *