ಭಾರತದಲ್ಲಿ ಕೋವಿಡ್‍ಗೆ ಬಲಿಯಾದವರೆಷ್ಟು?- ವಿಶ್ವಸಂಸ್ಥೆ ವರದಿಯಿಂದ ದೇಶದಲ್ಲಿ ರಾಜಕೀಯ ಸಮರ

Public TV
1 Min Read
corona virus 4

ನವದೆಹಲಿ: ದೇಶದಲ್ಲಿ ಕೋವಿಡ್ ಮಾರಿಗೆ ಬಲಿಯಾದವರ ಸಂಖ್ಯೆ ಬಗ್ಗೆ ಆರಂಭದಿಂದಲೂ ಗೊಂದಲ ಇದೆ. ಕೇಂದ್ರ ಸರ್ಕಾರ 4.80 ಲಕ್ಷ ಮಂದಿ ಎನ್ನುತ್ತಿದೆ. ವಿಶ್ವಸಂಸ್ಥೆಯ ವರದಿ ಮಾತ್ರ 47 ಲಕ್ಷ ಎನ್ನುತ್ತಿದೆ. ಆದರೆ ಸರ್ಕಾರ ಇದನ್ನು ಅಲ್ಲಗಳೆಯುತ್ತಿದೆ. ನಾವು ವಿಶ್ವಸಂಸ್ಥೆಗೆ ಕೋವಿಡ್ ಅಂಕಿ ಅಂಶ ನೀಡಿದ್ದೇವೆ. ಹೆಚ್ಚುವರಿ ಮಾಹಿತಿ ನೀಡುವ ಮುನ್ನ ನಾವು ನೀಡಿದ ಮಾಹಿತಿ ವಿಶ್ಲೇಷಿಸಿ. ಭಾರತದ ಕೋವಿಡ್ ವಿಚಾರದಲ್ಲಿ ವಿಶ್ವಸಂಸ್ಥೆ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರತಿಭಟನೆ ದಾಖಲಿಸಿದೆ.

who

ವಿಶ್ವಸಂಸ್ಥೆ ಅನುಸರಿಸ್ತಿರುವ ಗಣಿತ ವಿಧಾನಗಳ ಬಗ್ಗೆ ಭಾರತ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಆದ್ರೇ, ಈ ಆಕ್ಷೇಪವನ್ನು ಪರಿಗಣಿಸದೇ ಈ ಅಂದಾಜು ಅಂಕಿಸಂಖ್ಯೆಗಳನ್ನು ಹೇಗೆ ಬಿಡುಗಡೆ ಮಾಡಿದ್ರಿ ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ಮತ್ತೆ ಕೇಂದ್ರದ ಮೇಲೆ ಮುಗಿಬಿದ್ದಿದೆ. ರಾಹುಲ್ ಗಾಂಧಿ ಟ್ವೀಟ್ ಮಾಡಿ, ವಿಜ್ಞಾನ ಮತ್ತು ಗಣಿತದ ಅಂಕಿ ಸಂಖ್ಯೆಗಳು ಎಂದಿಗೂ ಸುಳ್ಳು ಹೇಳಲ್ಲ. ಆದರೆ ಮೋದಿ ಸುಳ್ಳು ಹೇಳ್ತಾರೆ ಅಂತಾ ದೂಷಣೆ ಮಾಡಿದ್ದಾರೆ. ಈಗಲಾದ್ರೂ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಗೌರವಿಸಿ. 4 ಲಕ್ಷ ಪರಿಹಾರ ನೀಡಿ ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್ ಕುಮಾರ ಮತ್ತು ವಿಶ್ವಸಂಸ್ಥೆಯ ಲೆಕ್ಕಗಳೆರಡು ಸುಳ್ಳು ಎಂದು ಬಿಜೆಪಿ ಕಿಡಿಕಾಡಿದೆ.

ಇತ್ತ ಬೆಂಗಳೂರಲ್ಲಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷರು, ಕರ್ನಾಟಕದಲ್ಲಿಯೂ ಕೋವಿಡ್‍ಗೆ 4.5 ಲಕ್ಷ ಮಂದಿ ಬಲಿ ಆಗಿದ್ದಾರೆ. ರಾಜ್ಯ ಸರ್ಕಾರ ಎಲ್ಲರಿಗೂ ಪರಿಹಾರ ಕೊಡ್ಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಟ್ವೀಟ್ ಮೂಲಕ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ. ಈ ಅಂಕಿ ಅಂಶವೆಲ್ಲಾ ಊಹಾಪೋಹ. ಯಾರು ನಂಬಬೇಡಿ. ಎಂದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೂ 40,060 ಜನ ಬಲಿ ಆಗಿದ್ದಾರೆ.. ಅಪಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *