ಚಂಡೀಗಢ: ಅಮೃತಸರದ ರಾಮ್‍ಬಾಗ್ ಪೊಲೀಸರು ನಕಲಿ ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಅಧಿಕಾರಿಯನ್ನು ಗುರುವಾರ ಬಂಧಿಸಿದ್ದಾರೆ.
ಕಾರ್ನಾಕ್ ವರ್ಮಾ ಬಂಧಿತ ಆರೋಪಿ. ಈತ ನಕಲಿ ಐಎಫ್‍ಎಸ್ ಅಧಿಕಾರಿಯಂತೆ ನಟಿಸಿ ಪಾಸ್‍ಪೋರ್ಟ್ ವೆರಿಫಿಕೇಷನ್‍ಗೆ ಬಂದ ಜನರಿಗೆ ಬೆದರಿಕೆ ಹಾಕುತ್ತಿದ್ದನು. ಅವನ ಕಾರನ್ನು ಚೆಕ್ ಪೋಸ್ಟನಲ್ಲಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯಿಂದ ನಾಲ್ಕು ಪಾಸ್‍ಪೋರ್ಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ ಮೊದಲ ಕಿಡ್ನಿ ಕಸಿಮಾಡಲು ಅನುಮತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ
ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ವ್ಯಕ್ತಿಯ ವಿರುದ್ಧ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ