ಬೀದರ್: ಕೊರೋನಾ ಸಂಖ್ಯೆ ಹೆಚ್ಚಾದ್ರೆ ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡೋದು ಅನಿರ್ವಾಯ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಟಫ್ ರೂಲ್ಸ್ ಸುಳಿವು ನೀಡಿದ್ದಾರೆ.
ಪ್ರಗತಿ ಪರಿಶೀಲನಾ ಸಭೆ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಜೀವ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿಯಾಗಿದ್ದು ಆ ಜವಾಬ್ದಾರಿ ನಿರ್ವಹಿಸುವ ಸಮಯದಲ್ಲಿ ಅನಿವಾರ್ಯತೆ ಬಂದರೆ ಟಫ್ ರೂಲ್ಸ್ ಜಾರಿ ಮಾಡುತ್ತೆವೆ ಎಂದರು. ಇದನ್ನೂ ಓದಿ: ಕಾನೂನು ಬಾಹಿರ ಚಟುವಟಿಕೆ ಮಾಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ: ಹಾಲಪ್ಪ ಆಚಾರ್
ಸದ್ಯ ಕೊರೊನಾ ಹೋಗಿದೆ ಎಂದು ಜನ ಕೊರೊನಾವನ್ನು ಮರೆತೇ ಬಿಟ್ಟಿದ್ದು ವಿಶ್ವದಲ್ಲಿ ಹಾಗೂ ದೇಶದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ವಿದ್ಯಮಾನಗಳನ್ನು ನಾವು ನೋಡುತ್ತಿದ್ದು ಚೀನಾ 4ನೇ ಅಲೆಗೆ ಸಿಲುಕಿ ಹೇಗೆ ಒದ್ದಾಡುತ್ತಿದೆ ಎಂದು ನೀವು ನೋಡುತ್ತಿದ್ದೀರಿ ಎಂದು ಎಚ್ಚರಿಕೆ ನೀಡಿದರು.
ನಮ್ಮಲ್ಲಿ ಕೂಡಾ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ದ್ವಿಗುಣವಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡೋದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಸರ್ಕಾರ ಪ್ರಾಥಮಿಕ ಹಂತವಾಗಿ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ ಎಂದರು. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ
ಇನ್ನೂ ಪಿಎಸ್‍ಐ ಅಕ್ರಮ ನೇಮಕಾತಿಯ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದಿವ್ಯ ಹಾಗರಗಿ ಎಷ್ಟು ದಿನ ತಪ್ಪಿಸಿಕೊಳ್ಳೊಕೆ ಆಗುತ್ತೆ? ಭೂಮಿ ಒಳಗಡೆ ಶಾಶ್ವತವಾಗಿ ಅಲ್ಲೆ ಇರೋಕೆ ಆಗುತ್ತಾ? ಇಂದಿನ ಅಡ್ವಾನ್ಸ್ ಯುಗದಲ್ಲಿ ಮೊಬೈಲ್ ಟ್ರಾಕ್ ಮಾಡಿ ಹಿಡಿಯುತ್ತಾರೆ ಎಂದು ಹೇಳಿದರು.