ವಿಜಯ್ ದೇವರಕೊಂಡ ಜೊತೆ ಕಾಶ್ಮೀರಕ್ಕೆ ಹಾರಿದ ಸಮಂತಾ

Public TV
1 Min Read
samantha vijay 1

ಸಿನಿರಂಗದ ಓಡುವ ಕುದುರೆ ಸಮಂತಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ಹೊಸ ಚಿತ್ರ ಅನೌನ್ಸ್ ಆಗಿತ್ತು. ಅದರ ಬೆನ್ನಲ್ಲೇ ವಿಜಯ್ ದೇವರಕೊಂಡ ಜೊತೆ ಸಮಂತಾ ಕಾಶ್ಮೀರಕ್ಕೆ ಹಾರಿದ್ದಾರೆ.

samantha vijay

`ಮಹಾನಟಿ’ ಚಿತ್ರದ ಮೂಲಕ ಈಗಾಗಲೇ ಸಿನಿರಸಿಕರ ಗಮನಸೆಳೆದಿರೋ ಜೋಡಿ ವಿಜಯ್ ದೇವರಕೊಂಡ ಮತ್ತು ಸಮಂತಾ ಈಗ `ಮಜಲಿ’ ಖ್ಯಾತಿಯ ಶಿವ ನಿರ್ವಾಣ ನಿರ್ದೇಶನದ ಹೊಸ ಚಿತ್ರದಲ್ಲಿ ಇಬ್ಬರು ಮತ್ತೆ ಜತೆಯಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣಕ್ಕಾಗಿ ಸಮಂತಾ ಮತ್ತು ದೇವರಕೊಂಡ ಕಾಶ್ಮೀರಕ್ಕೆ ಹೋಗಿದ್ದಾರೆ.

ಇನ್ನು ಸಮಂತಾ ಹೊಸ ಪ್ರಾಜೆಕ್ಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರಕ್ಕೆ ಹೋಗುತ್ತಿರೋ ಸಣ್ಣ ತುಣುಕನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್‌ ಮಾಡಿದ್ದಾರೆ. ವಿಜಯ್ ಮತ್ತು ಸಮಂತಾ ಸಿನಿಮಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

ರೋಜಾ ಸಿನಿಮಾಡಿಫರೆಂಟ್ ಕಥೆ ಜತೆ ವಿಭಿನ್ನ ಪಾತ್ರದ ಮೂಲಕ ಸಿನಿರಸಿಕರ ಗಮನ ಸೆಳೆಯಲು ವಿಜಯ್ ಮತ್ತು ಸಮಂತಾ ಬರುತ್ತಿದ್ದಾರೆ. 1992ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ `ರೋಜಾ’ ಚಿತ್ರದ ಕಥೆಯನ್ನ ಈಗಿನ ಜನರೇಷನ್‌ಗೆ ತಕ್ಕಂತೆ ಪ್ರೇಮಕಥೆ ತೋರಿಸಲು ನಿರ್ದೇಶಕ ಶಿವಾ ನಿರ್ವಾಣ ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಬೆಳ್ಳಿಪರದೆಯಲ್ಲಿ ಈ ಜೋಡಿ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *