ಕೊನೆಯಲ್ಲಿ ಪರಾಗ್ ಸ್ಫೋಟಕ ಆಟ – ಆರ್‌ಆರ್‌ಗೆ 29 ರನ್‍ಗಳ ಜಯ, ಮತ್ತೆ ಕೊಹ್ಲಿ ವಿಫಲ

Public TV
2 Min Read
RCB KOHILI OUT

ಮುಂಬೈ: ಕೊನೆಯಲ್ಲಿ ರಿಯಾನ್ ಪರಾಗ್ ಸ್ಫೋಟಕ ಆಟ ನಂತರ ಬೌಲರ್‍ಗಳು ಉತ್ತಮ ಪ್ರದರ್ಶನದಿಂದ ಆರ್‌ಸಿಬಿ ವಿರುದ್ಧ ರಾಜಸ್ಥಾನ 29 ರನ್‍ಗಳ ಜಯ ಸಾಧಿಸಿದೆ.

145 ರನ್‍ಗಳ ಸುಲಭ ಸವಾಲನ್ನು ಪಡೆದ ಆರ್‌ಸಿಬಿ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 19.3 ಓವರ್‍ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯ್ತು.

RIYAN PARAG RR

ಆರ್‌ಸಿಬಿ ತಂಡಕ್ಕೂ ಆರಂಭದಲ್ಲೇ ಆಘಾತ ಕಾದಿತ್ತು. ಮೊದಲ ಓವರ್‍ನಲ್ಲೇ ಕೊಹ್ಲಿ 2 ಬೌಂಡರಿ ಬಾರಿಸಿದ ನಂತರ ಉತ್ತಮ ಫಾರ್ಮ್‍ನಲ್ಲಿದ್ದಾರೆ ಎಂದುಕೊಂಡಿತ್ತು. ಭರವಸೆ ಹುಸಿಯಾಗಿಸಿದ ಕೊಹ್ಲಿ 2ನೇ ಓವರ್ ನಲ್ಲೇ ತಮ್ಮ ವಿಕೆಟ್ ಒಪ್ಪಿಸಿ ಹೊರನಡೆದರು. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

IPL RR VS RCB 2

ನಾಯಕ ಫಾಫ್ ಡು ಪ್ಲೆಸಿಸ್ 23(21 ಎಸೆತ), ರಜತ್ ಪತಿದರ್ 16 ರನ್, ಹಸರಂಗ 18 ರನ್ ಹೊಡೆದು ಔಟಾದರು. ರಾಜಸ್ಥಾನ ಪರ ಕುಲದೀಪ್ ಸೆನ್ 4, ಅಶ್ವಿನ್ 3, ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು.

ಪುಣೆಯ ಎಂಸಿಎ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ರಾಜಾಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ಕಷ್ಟ ಎದುರಿಸಿತು. ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿದ ಬೌಲರ್‌ಗಳು ರಾಜಸ್ಥಾನ್ ರಾಯಲ್ಸ್ ತಂಡವನ್ನು 144 ರನ್‍ಗಳಿಗೆ ಕಟ್ಟಿಹಾಕಿದರು.

RCB VIRAT KOHILI

ರಾಜಸ್ಥಾನ್ ಪರ ರಿಯಾನ್ ಪರಾಗ್ 29 ಎಸೆತಗಳಲ್ಲಿ 56 ರನ್‍ಗಳಿಸಿ ತಂಡಕ್ಕೆ ಆಸರೆಯಾದರು. ಜವಾಬ್ದಾರಿ ಆಟ ಪ್ರದರ್ಶಿಸುತ್ತಿದ್ದ ಸಂಜೂ ಸ್ಯಾಮ್ಸನ್(27) ರಿವರ್ಸ್ ಸ್ವೀಪ್ ಮೂಲಕ ಫೋರ್‌ ಹೊಡೆಯುವ ಪ್ರಯತ್ನದಿಂದ ಕ್ಲೀನ್ ಬೌಲ್ಡ್ ಆದರು.

ರಾಜಸ್ಥಾನ್‍ಗೆ ಪರಾಗ್ ಆಸರೆ: ಆರ್‌ಸಿಬಿ ಬೌಲಿಂಗ್ ದಾಳಿಗೆ ಆರಂಭದಲ್ಲೇ ತತ್ತರಿಸಿದ ರಾಜಸ್ಥಾನ್ ರಾಯಲ್ಸ್‍ಗೆ ರಿಯಾನ್ ಪರಾಗ್ 56 ರನ್(29 ಎಸೆತ, 3 ಬೌಂಡರಿ, 4 ಸಿಕ್ಸರ್) ಗಳಿಸಿ ಆಸರೆಯಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಉತ್ಸಾಹ ಕಳೆದು ಕೊಳ್ಳದೇ ಬಿರುಸಿನ ಆಟವಾಡಿದ ರಿಯಾನ್ ಪರಾಗ್ ಆಕರ್ಷಕ ಅರ್ಧಶತಕ ಬಾರಿಸಿದರು. ಅಲ್ಲದೇ ತಂಡದ ಮೊತ್ತವನ್ನು 140ರ ಗಡಿದಾಟಿಸುವಲ್ಲಿ ಯಶಸ್ವಿಯಾದರು.

RR VS RCB

ಆರ್‍ಆರ್ ಬ್ಯಾಟಿಂಗ್ ವೈಫಲ್ಯ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‍ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಓಪನರ್‍ಗಳಾಗಿ ಕಣಕ್ಕಿಳಿದ ಜಾಸ್ ಬಟ್ಲರ್ 8 ರನ್ ಹಾಗೂ ದೇವದತ್ ಪಡಿಕ್ಕಲ್ 7 ರನ್ ಹೊಡೆದು ಔಟಾದರು. ನಂತರ ಬ್ಯಾಟಿಂಗ್‍ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಆರ್.ಅಶ್ವಿನ್ ಬಿರುಸಿನ ಆಟವಾಡಿ 17 ರನ್ ಹೊಡೆದು ಹೊರನಡೆದರು. ನಾಯಕ ಸಂಜು ಸ್ಯಾಮ್ಸನ್ 27 ರನ್, ಮಧ್ಯಮ ಕ್ರಮಾಂಕದಲ್ಲಿ ಬಂದ ಡ್ಯಾರೆಲ್ ಮಿಚೆಲ್ 16 ರನ್ ಹೊಡೆದು ಔಟಾದರು.

PARAG 50

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಿದರು. ಜಾಶ್ ಹೇಜಲ್‍ವುಡ್ 2 ಪ್ರಮುಖ ವಿಕೆಟ್ ಪಡೆದು ಮಿಂಚಿದರೆ ಇವರಿಗೆ ಉತ್ತಮ ಸಾಥ್ ನೀಡಿದ ವನಿಂದು ಹಸರಂಗ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *