ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್

Public TV
1 Min Read
Dharwad 2

ಧಾರವಾಡ: ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು, ಶ್ರೀರಾಮ ಸೇನೆಯ ಬಂಧಿತ ಕಾರ್ಯಕರ್ತ ಮಹಾಲಿಂಗ ಐಗಳಿ ಧಾರವಾಡ ಗ್ರಾಮೀಣ ಠಾಣೆಗೆ ಪ್ರತಿ ದೂರು ದಾಖಲಿಸಿದ್ದಾರೆ.

ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಏ.9ರಂದು ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಪ್ರಕರಣ ನಡೆದಿತ್ತು. ಆ ವೇಳೆ ನಬೀಸಾಬ್ ಇರಲಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

Water Melon Case

ದೂರಿನಲ್ಲಿ ಏನಿದೆ?: ಅಂದು ನಾವು ದೇವರ ದರ್ಶನ ಬಳಿಕ ಕಲ್ಲಂಗಡಿ ತಿನ್ನಲು ಹೋಗಿದ್ದೆವು. ಆಗ ಕಲ್ಲಂಗಡಿ ಮಾರುವವನು ಉಗುಳಿ ಕೊಡುತ್ತಿದ್ದ. ಈ ರೀತಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ. ಇದಕ್ಕೆ ನಾವು ಅಕ್ಷೇಪ ವ್ಯಕ್ತಪಡಿಸಿದೆವು. ಆಗ ನಮಗೆ ಚಾಕು ತೋರಿಸಿ ಕಲ್ಲಂಗಡಿ ಕೂಯ್ದಂತೆ ನಿಮ್ಮನ್ನು ಕೊಯ್ತಿನಿ ಎಂದು ಕೊಲೆ ಬೆದರಿಕೆ ಹಾಕಿದ್ದ.

Water Melon Case 2

ಇದರಿಂದಾಗಿ ಅಲ್ಲಿ ನೆರೆದಿದ್ದ ಜನರು ಗುಂಪುಗುಡಿ ಅವನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದರು. ಆದರೆ ಅವನು ಹಾಗೂ ಅವನ ಜೊತೆಗಿದ್ದವರು ದೊಡ್ಡ ರಾದ್ಧಂತ ಮಾಡಿದರು. ಜೊತೆಗೆ ಮೈಲಾರಪ್ಪನನ್ನು ಆ ವ್ಯಕ್ತಿ ನೂಕಿದ್ದನು. ಇದರಿಂದಾಗಿ ಮೈಲಾರಪ್ಪ ಕಲ್ಲಂಗಡಿ ತಳ್ಳುಗಾಡಿ ಮೇಲೆ ಬಿದ್ದಿದ್ದ. ಇದನ್ನೂ ಓದಿ: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

Dharwad

ಈ ರೀತಿ ಮಾಡಿದ ವ್ಯಕ್ತಿ ಬಿಳಿ ಶರ್ಟ್, ಕಪ್ಪು ಬೂದಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಆದರೆ ಮರುದಿನ ಪೊಲೀಸರು ನಮ್ಮನ್ನು ಬಂಧಿಸಲು ಬಂದಾಗಲೇ ನಬೀಸಾಬ್ ನಮ್ಮ ಮೇಲೆ ದೂರು ದಾಖಲಿಸಿದ್ದಾನೆ ಎಂದು ತಿಳಿಯಿತು. ಆದರೆ ಆ ಸಮಯದಲ್ಲಿ ನಬೀಸಾಬ್ ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಘಟನೆಯಲ್ಲಿ ಭಾಗಿಯಾದ ನಿಜವಾದ ವ್ಯಕ್ತಿ ಬೇರೆ ಇದ್ದಾನೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನೂ ಓದಿ:  ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

Share This Article
Leave a Comment

Leave a Reply

Your email address will not be published. Required fields are marked *