ಮುಂಬೈ: ಕೊರೊನಾ ಸೋಂಕಿನ ಹೊಸ ರೂಪಾಂತರಿಯಾಗಿರುವ XE ತಳಿ ವಯಸ್ಸಾದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ಮಾರಣಾಂತಿಕವಲ್ಲ ಹಾಗೂ ಲಕ್ಷಣರಹಿತವಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿರುವ 67 ವರ್ಷದ ಮುಂಬೈ ನಿವಾಸಿಗೆ XE ಸೋಂಕು ತಗುಲಿತ್ತು. ಆ ವ್ಯಕ್ತಿ ಮಾ.6ರಂದು ಲಂಡನ್‍ನಿಂದ ಆಗಮಿಸಿದ್ದರು. ಜೊತೆಗೆ ಅವರು ಇಬ್ಬರು ಬ್ರಿಟಿಷ್ ವ್ಯಕ್ತಿಗಳ ಸಂಪರ್ಕದಲ್ಲಿದ್ದರು. ಮಾ.11ರಂದು ಅವರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತು. ಮಾ.12ರಂದು ವಡೋದರಾದಲ್ಲಿ ಅವರನ್ನು ಪರೀಕ್ಷಿಸಲಾಯಿತು. ಜೊತೆಗೆ ಮಾದರಿಯನ್ನು ಜೀನೋಮ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅವರು ಮರುದಿನ ಗುಜರಾತ್‍ನಿಂದ ಮುಂಬೈಗೆ ಬಂದಿದ್ದರು.
ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಇತರೆ ಮೂವರು ವ್ಯಕ್ತಿಯನ್ನು ಪರೀಕ್ಷಿಸಲಾಗಿತ್ತು. ಆದರೆ ಅವರಿಗೆಲ್ಲರಿಗೂ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲ್ಲ, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತೆ: ಶೆಹಬಾಜ್ ಷರೀಫ್
ಆ ವ್ಯಕ್ತಿ ಮಾರ್ಚ್ 20ರಿಂದ ಮುಂಬೈನಲ್ಲಿರುವ ತನ್ನ ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದಾನೆ. ಅವರು ರೋಗ ಲಕ್ಷಣರಹಿತರಾಗಿದ್ದಾರೆ. ಅವರು ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದರು. ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಹೊಸ ರೂಪಾಂತರದ ಬಗ್ಗೆ ಯಾವುದೇ ಆತಂಕವಿಲ್ಲ. ಇದು ಮಾರಣಾಂತಿಕವಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ- ಜಮೀರ್ ಹೇಳಿಕೆ ಬೆನ್ನಲ್ಲೇ ಸೈಮನ್ ರಾಜ್ ಕಣ್ಮರೆ