ಇಸ್ಲಾಮಾಬಾದ್: ವಿಶ್ವಾಸಮತ ಗಳಿಸುವಲ್ಲಿ ವಿಫಲರಾದ ಇಮ್ರಾನ್ ಖಾನ್ ಅಧಿಕಾರ ಅಂತ್ಯವಾಗಿದ್ದು, ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಲು ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಮುಖ್ಯಸ್ಥ ಶೆಹಬಾಜ್ ಷರೀಫ್ ಸಿದ್ಧರಾಗಿದ್ದಾರೆ.
ಇಮ್ರಾನ್ ಖಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ ನಂತರ ಶೆಹಬಾಜ್ ಷರೀಫ್ ಅವರು ರಾಷ್ಟ್ರವನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?:
ಕಳೆದ ರಾತ್ರಿ ನಡೆದ ಹೈಡ್ರಾಮಾದ ನಂತರ ಪಾಕಿಸ್ತಾನವು ಗಂಭೀರ ಬಿಕ್ಕಟ್ಟಿನಿಂದ ಹೊರಬಂದಿದೆ. ಹೊಸ ಉದಯಕ್ಕೆ ಪಾಕಿಸ್ತಾನಿ ರಾಷ್ಟ್ರಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವಾಸಮತ ಗಳಿಸುವಲ್ಲಿ ವಿಫಲ- ಅಧಿಕಾರ ಕಳೆದುಕೊಂಡ ಇಮ್ರಾನ್ ಖಾನ್
Advertisement
الّلہ تعالٰی نے رمضان کے مبارک ماہ میں اس قوم پر اپنی خصوصی رحمتیں نازل فرمائیں۔ الحمدالّلہ، وطن عزیز اور پارلیمنٹ کا ایوان، آخرِ شب ایک سنگین بحران سے آزاد ہوا۔ پاکستانی قوم کو ایک نئی سحر اور سحری مبارک ہو۔ الّلہ تعالٰی ، پاکستان اور آپ سب کا حامی و ناصر ہو، آمین!
— Shehbaz Sharif (@CMShehbaz) April 9, 2022
ಹೊಸ ಸರ್ಕಾರದ ಅಡಿಯಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಯಾವುದೇ ಪ್ರತೀಕಾರ ತೀರಿಸಿಕೊಳ್ಳಲ್ಲ ಎಂದು ಭರವಸೆ ನೀಡಿದ ಅವರು, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪಿಎಂ ಸ್ಥಾನದಿಂದ ಇಮ್ರಾನ್ ಕೆಳಗಿಳಿದ್ರೆ ಪಾಕ್‌ನ ಮುಂದಿನ ಪ್ರಧಾನಿ ಇವರೇ
Advertisement
ನಾವು ಯಾರ ಮೇಲೂ ಸೇಡು ತೀರಿಸಿಕೊಳ್ಳುವುದಿಲ್ಲ, ಯಾರಿಗೂ ಅನ್ಯಾಯ ಮಾಡುವುದಿಲ್ಲ ಮತ್ತು ಯಾರನ್ನೂ ಜೈಲಿಗೆ ಹಾಕುವುದಿಲ್ಲ, ಕಾನೂನು ತನ್ನದೇ ದಾರಿ ಹಿಡಿಯುತ್ತದೆ ಎಂದರು.
ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ವಜಾಗೊಳಿಸಿದ ನಂತರ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯು ಏಪ್ರಿಲ್ 11 ರಂದು ಮಧ್ಯಾಹ್ನ 2ಗಂಟೆಗೆ ಪುನಃ ಸೇರಲಿದೆ. ಸಂಯೋಜಿತ ವಿರೋಧ ಪಕ್ಷವು ಈಗಾಗಲೇ ಪಿಎಂಎಲ್‍ಎನ್ ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಜಂಟಿ ಅಭ್ಯರ್ಥಿಯಾಗಿ ಹೆಸರಿಸಿದೆ.