ಬಾಲಿವುಡ್ ಮಾತಿಗೆ ಖಡಕ್ಕಾಗಿ ಉತ್ತರಿಸಿದ ಪ್ರಿನ್ಸ್ ಮಹೇಶ್

Public TV
1 Min Read
bharat ane nenu mahesh babu

ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಬಹುಬೇಡಿಕೆ ನಟರಲ್ಲಿ ಒಬ್ಬರು. ಟಾಲಿವುಡ್‌ನಲ್ಲಿ ಈ ನಟ ಮಿಲ್ಕಿ ಬಾಯ್ ಎಂದೇ ಫೇಮಸ್. ಹಾಗಾಗಿ ಇವರು ಬಾಲಿವುಡ್‌ಗೆ ಹಾರುತ್ತಾರೆ ಎಂದು ಹೇಳಲಾಗಿತ್ತು. ಇಂಡಸ್ಟ್ರಿಗೆ ಬಂದು ಇವರು ಹಲವು ವರ್ಷಗಳಾದರೂ ಟಾಲಿವುಡ್ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ನಟಿಸಿಲ್ಲ. ಹಾಗಾಗಿ ಟಾಲಿವುಡ್ ಫ್ಯಾನ್ಸ್‌ಗೆ ಇವರೆಂದರೆ ಅತೀವ ಅಭಿಮಾನ. ಹೆಚ್ಚು ಗಾಸಿಪ್‌ಗಳಿಗೆ ಗುರಿಯಾದ ಈ ನಟ, ಇತ್ತೀಚೆಗೆ ಬಾಲಿವುಡ್ ಸಿನಿಮಾ ಮಾಡುತ್ತಾರೆ ಎಂಬ ಹೇಳಿಕೆಗಳು ಕೇಳಿ ಬರುತ್ತಿತ್ತು. ಈ ಸುದ್ದಿಗೆ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

Tollywood Mahesh Babu 1

ಈ ಸ್ಟಾರ್ ನಟನಿಗೆ ಬಾಲಿವುಡ್‌ನಿಂದ ಅನೇಕ ಆಫರ್‌ಗಳು ಬರುತ್ತಿದ್ದು, ಸಂಭಾವನೆ ಕೂಡ ಹೆಚ್ಚು ಕೊಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಕುರಿತು ಮಾಧ್ಯಮಗಳು ಪ್ರಶ್ನೆ ಕೇಳಿದ್ದು, ಮಹೇಶ್ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಆಲಿಯಾ-ರಣಬೀರ್

happy birthday mahesh babu web

‘ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯವಿಲ್ಲ. ನಾನು ತೆಲುಗು ಸಿನಿಮಾವನ್ನು ಮಾತ್ರ ಮಾಡುತ್ತೇನೆ. ಆ ಸಿನಿಮಾ ಪ್ರಪಂಚದ್ಯಾಂತ ತೆರೆಕಾಣುತ್ತೆ. ಬಾಲಿವುಡ್ ರಂಗಕ್ಕೆ ನಾನ್ಯಾಕೆ ಹೋಗಬೇಕು’ ಎಂದು ಮಹೇಶ್ ಬಾಬು ಖಡಕ್ಕಾಗಿಯೇ ಉತ್ತರಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ವೈರಲ್ ಆಗಿದೆ.

FotoJet 6 5

ಪ್ರಸ್ತುತ ಮಹೇಶ್ ಬಾಬು ಮತ್ತು ಎಸ್.ಎಸ್.ರಾಜಮೌಳಿ ಅವರ ಕಾಂಬೀನೇಷನ್‌ನಲ್ಲಿ ಸಿನಿಮಾವೊಂದು ಮೂಡಿಬರುತ್ತಿದೆ. ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಆರ್‌ಆರ್‌ಆರ್‌ ಸಿನಿಮಾ ನಂತರ ರಾಜಮೌಳಿ ಅವರು ಇದೇ ಮೊದಲಬಾರಿಗೆ ಮಹೇಶ್ ಜೊತೆ ಕೆಲಸ ಮಾಡುತ್ತಿದ್ದು, ಈ ಸಿನಿಮಾ ಬಗ್ಗೆ ಟಾಲಿವುಡ್‌ನಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ: ಕಪಾಳಮೋಕ್ಷ ಘಟನೆಯ ನಂತರ 10 ವರ್ಷ ಆಸ್ಕರ್ ಪ್ರಶಸ್ತಿಯಿಂದ ಬ್ಯಾನ್ ಆದ ವಿಲ್ ಸ್ಮಿತ್

Share This Article
Leave a Comment

Leave a Reply

Your email address will not be published. Required fields are marked *