ರಣಕುಂಡೆಯೆ ಯುವಕನ ಕೊಲೆ ಪ್ರಕರಣ – ನಾಲ್ವರು ಆರೋಪಿಗಳು ಅರೆಸ್ಟ್

Public TV
1 Min Read
belahavi murder

ಬೆಳಗಾವಿ: ರಣಕುಂಡೆಯೆ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಂತಕರನ್ನು ಪೊಲೀಸರ ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ರಣಕುಂಡೆಯೆ ಗ್ರಾಮದ ನಿವಾಸಿ ನಾಗೇಶ್ ಪಾಟೀಲ್(31)ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪರಿಣಾಮ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತನಿಖೆ ಪ್ರಾರಂಭಿಸಲಾಗಿತ್ತು. ಈ ಹಿನ್ನೆಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಅವರನ್ನು ಆದಷ್ಟು ಬೇಗ ಬಂಧನ ಮಾಡಲಾಗುತ್ತದೆ ಎಂದು ಕಮಿಷನರ್ ಡಾ.ಬೋರಲಿಂಗಯ್ಯ ಹೇಳಿದ್ದಾರೆ.  ಇದನ್ನೂ ಓದಿ:  ಚಿಕನ್ ಖರೀದಿ ಮಾಡುವಾಗ ಗಲಾಟೆ – ಯುವಕ ಬರ್ಬರ ಹತ್ಯೆ

belahavi murder 1

ಪ್ರಕರಣ ಹಿನ್ನೆಲೆ: ಬೆಳಗಾವಿ ತಾಲೂಕಿನ ರಣಕುಂಡೆಯೆ ಗ್ರಾಮದ ನಿವಾಸಿ ನಾಗೇಶ್ ಪಾಟೀಲ್ ಮನೆಯಲ್ಲಿಯೇ ಮಲಗಿಕೊಂಡಿದ್ದ. ಆದರೆ ಆತನನ್ನು ಬಲವಂತವಾಗಿ ಹೊರಗಡೆ ಕರೆದುಕೊಂಡು ಹೋಗಿ ಭೀಕರವಾಗಿ ಹಲ್ಲೆಮಾಡಿ ಮನೆಯ ಮುಂದೆ ಬಿಸಾಡಿ ಹೋಗಿದ್ರು. ಇದಲ್ಲದೇ ನಾಗೇಶ್ ರಕ್ಷಣೆಗೆ ಮುಂದಾದ ಆತನ ಸಹೋದರ ಮನೋಜ್ ಪಾಟೀಲ್ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ.

ಮಾರಣಾಂತಿಕ ಹಲ್ಲೆಯಿಂದ ನಾಗೇಶ್ ಪಾಟೀಲ್ ಸಾವನ್ನಪ್ಪಿದ್ದನು. ಇತ್ತ ಗಂಭೀರ ಗಾಯಗೊಂಡ ಮನೋಜ್ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Police Jeep

ಪೆÇಲೀಸರ ಪ್ರಾಥಮಿಕ ತನಿಖೆಯಲ್ಲಿ, ಕೊಲೆಯಾದ ನಾಗೇಶ್ ತಂದೆ ಆರೋಪಿ ಪ್ರಮೋದ್ ಪಾಟೀಲ್ ಕುಟುಂಬಕ್ಕೆ 20 ಸಾವಿರ ರೂ. ಸಾಲ ನೀಡಿದ್ದರು. ತಂದೆ ಕೊಟ್ಟ ಹಣವನ್ನು ವಾಪಸ್ ಕೇಳೋದಕ್ಕೆ ನಾಗೇಶ್ ಪದೇ-ಪದೇ ಅವರ ಮನೆಗೆ ಹೋಗುತ್ತಿದೆ. ಈ ಹಿನ್ನೆಲೆ ಎರಡು ಕುಟುಂಬಗಳ ಮಧ್ಯೆ ಹಣಕಾಸಿನ ವಿಚಾರದಲ್ಲಿ ಗಲಾಟೆ ಆಗುತ್ತಿತ್ತು. ಇದರಿಂದ ವೈಯಕ್ತಿಕ ವೈಷಮ್ಯ ಬೆಳೆದು ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ನಾವು ಎಷ್ಟೇ ದೊಡ್ಡವರಾದರೂ ಶಾಲೆ, ಗುರುಗಳು ಅಂದಾಗ ಗೌರವದ ಭಾವ ಮೂಡುತ್ತೆ: ಆರ್.ಅಶೋಕ್ 

ಬೆಳಗಾವಿ ತಾಲೂಕಿನ ರಣಕುಂಡೆ ಗ್ರಾಮದ ಪ್ರಮೋದ್ ಪಾಟೀಲ್(31), ಶ್ರೀಧರ್ ಪಾಟೀಲ್(28), ಮಹೇಂದ್ರ ಕಂಗ್ರಾಳಕರ(21), ಬೂಮನಿ ಡೋಕ್ರೆ(33) ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಮುಂದುವರೆದಿದೆ.

Share This Article
Leave a Comment

Leave a Reply

Your email address will not be published. Required fields are marked *