ನನ್ನ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ: ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್‌

Public TV
1 Min Read
Arvind Kejriwal

ನವದೆಹಲಿ: ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ತಮ್ಮ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಬಿಜೆಪಿ ಬೆಂಬಲಿತ ಪ್ರತಿಭಟನಾಕಾರರು ತಮ್ಮ ಮನೆ ಮೇಲೆ ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ಅತಿ ದೊಡ್ಡ ಪಕ್ಷ ಇಂತಹ ಗೂಂಡಾಗಿರಿ ನಡೆಸಿದರೆ, ಜನರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಜನರು ಇದೇ ಸರಿಯಾದ ಮಾರ್ಗ ಎಂದು ಭಾವಿಸುತ್ತಾರೆ. ದೇಶ ಈ ರೀತಿ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಮನೆ ಮೇಲೆ ದಾಳಿ- 8 ಮಂದಿ ಬಂಧನ

BJP Flag Final 6

ಅರವಿಂದ್‌ ಕೇಜ್ರಿವಾಲ್‌ ಮುಖ್ಯವಲ್ಲ, ಆದರೆ ದೇಶ ಮುಖ್ಯ. ನನ್ನ ದೇಶಕ್ಕಾಗಿ ಪ್ರಾಣವನ್ನೂ ತೆರಬಲ್ಲೆ ಎಂದು ಕೇಜ್ರಿವಾಲ್‌ ಮಾತನಾಡಿದ್ದಾರೆ.

ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೇಜ್ರಿವಾಲ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಬೆಂಬಲಿತರು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಮುಖ್ಯಮಂತ್ರಿ ಮನೆ ಮೇಲೆ ದಾಳಿಗೆ ಮುಂದಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್

kejriwal

ಕೇಜ್ರಿವಾಲ್‌ ಅವರನ್ನು ಹತ್ಯೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಎಎಪಿ ಗಂಭೀರ ಆರೋಪ ಮಾಡಿತ್ತು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಎಎಪಿ ಸಚಿವರು, ಶಾಸಕರು ಆಗ್ರಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *