ಬೆಂಗಳೂರು: ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇಂದು ಬೆಳಗ್ಗೆಯಿಂದ ಅಪರಿಚಿತ ನಂಬರ್‌ನಿಂದ ಪದೇ ಪದೇ ಕರೆ ಬರ್ತಿತ್ತು. ಸಂಜೆ ವೇಳೆಗೆ ಕಾಲ್ ರಿಸಿವ್ ಮಾಡಿದ ಶಾಸಕ ರೇಣುಕಾಚಾರ್ಯಗೆ ವ್ಯಕ್ತಿಯು ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ನಾಲ್ಕೈದು ದಿನಗಳಲ್ಲಿ ನಿನ್ನ ಮತ್ತು ನಿನ್ನ ಮಗನನ್ನು ಕೊಲೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
ಹಿಜಾಬ್, ಮುಸ್ಲಿಂ ವ್ಯಾಪಾರಿಗಳ ನಿಷೇಧ, ಹಲಾಲ್ ಕಟ್ ವಿಚಾರವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದೀರಿ. ಇಷ್ಟು ದಿನ ಇಲ್ಲದ ಈ ವಿಚಾರಗಳು ನೀವು ಬಂದ ಮೇಲೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬಿಜೆಪಿ ನಾಯಕರ ಕಥೆ ಏನಾಗಲಿದೆ ನೋಡ್ತಿರಿ ಎಂದಿದ್ದಾನೆ. ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ
ನೀನ್ನೊಬ್ಬನನ್ನೇ ಅಲ್ಲ ಸಿ ಟಿ ರವಿ, ಯತ್ನಾಳ್ ಅವರನ್ನು ಸಹ ಬಿಡಲ್ಲ ಅಂತ ಬಿಜೆಪಿ ನಾಯಕರನ್ನು ಅವಾಚ್ಯ ಪದಗಳಿಂದ ಬೈದಿದ್ದಾನೆ. ಸದ್ಯ ಈ ಸಂಬಂಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರ ಪ್ರಾಥಮಿಕ ಮಾಹಿತಿಯಲ್ಲಿ ಇಂಟರ್ನೆಟ್ ಕಾಲ್ ಬಳಸಿ ಮಾತಾಡಿರುವುದು ತಿಳಿದಿದೆ.