ಕಲಬುರಗಿ: ಸಹಾಯಕ ಪ್ರಾಧ್ಯಾಪಕನೋರ್ವ ಕಾಲೇಜಿನ ಪ್ರಿನ್ಸಿಪಾಲ್ ಮೇಲೆ ಆ್ಯಸಿಡ್ ಎರಚಿ ಹಲ್ಲೆ ಮಾಡಲು ಯತ್ನಿಸಿರುವ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಹೆಚ್‍ಕೆಇ ಸೊಸೈಟಿಯ ಫಾರ್ಮಸಿ ಕಾಲೇಜ್‍ನ ಪ್ರಿನ್ಸಿಪಾಲ್ ಡಾ.ಅರುಣ್ ಕುಮಾರ್ ಬೆನಕಳ ಮೇಲೆ ಇದೇ ಫಾರ್ಮಸಿ ಕಾಲೇಜ್‍ನ ಸಹಾಯಕ ಪ್ರಾಧ್ಯಾಪಕನಾಗಿರುವ ಶಾಂತವೀರ ಸಲಗಾರ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನ ನಡೆಸಿದ್ದಾರೆ. ಈ ಘಟನೆ ಮಾರ್ಚ್ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಾಂತವೀರ ಪರೀವಿಕ್ಷಣಾ ಇನ್ಸ್‌ಪೆಕ್ಟರ್ ಆಗಿ ನೇಮಕವಾಗಬೇಕಾಗಿತ್ತು. ಆದರೆ ಪ್ರಿನ್ಸಿಪಾಲ್ ಅರುಣ್ ಕುಮಾರ್ ತಮ್ಮ ಕೈವಾಡದಿಂದ ಹುದ್ದೆ ತಪ್ಪಿಸಿದ್ದಾರೆ ಎಂದು ಗ್ರಹಿಸಿಕೊಂಡು ಶಾಂತವೀರ ಆ್ಯಸಿಡ್ ದಾಳಿ ನಡೆಸಲು ಮುಂದಾಗಿದ್ದಾರೆ. ಎಚ್‍ಕೆಇ ಫಾರ್ಮಸಿ ಕಾಲೇಜ್ ಆವರಣದಲ್ಲಿಯೇ ಆ್ಯಸಿಡ್ ಎರಚಲು ಮುಂದಾಗಿದ್ದ ಶಾಂತವೀರ, ಅವಾಚ್ಯ ಶಬ್ದಗಳಿಂದ ಪ್ರಿನ್ಸಿಪಾಲ್‍ರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ತನ್ನ ಕಾರಿನಿಂದ ಡಿಕ್ಕಿ ಹೊಡೆದು ಅಪಘಾತಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೆಲ ಪ್ರಾಧ್ಯಾಪಕರು ಪ್ರಿನ್ಸಿಪಾಲ್‍ರನ್ನು ರಕ್ಷಣೆ ಮಾಡಿ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯೇತರ ಪ್ರತಿಪಕ್ಷಗಳ ಆಧಾರ ಸ್ತಂಭ ಮಮತಾ ಬ್ಯಾನರ್ಜಿ: ಕಾಂಗ್ರೆಸ್ ಸಂಸದ ಬಣ್ಣನೆ
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಶಾಂತವೀರ ಸಲಗಾರ ಆ್ಯಸಿಡ್ ಎರಚಲು ಪ್ರಯತ್ನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಈ ಕುರಿತು ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕಿದ್ದ ಪ್ರಾಧ್ಯಾಪಕ ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ