ಪತ್ನಿ ಮಟನ್ ಕರಿ ಮಾಡ್ಲಿಲ್ಲ ಅಂತ ಪೊಲೀಸರಿಗೆ ಟಾರ್ಚರ್ ಕೊಟ್ಟ ವ್ಯಕ್ತಿ

Public TV
1 Min Read
Telangana

ಹೈದರಾಬಾದ್: ಪತ್ನಿ ಮಟನ್ ಕರಿ ಮಾಡಿ ಕೊಡಲಿಲ್ಲ ಎಂದು ಪೊಲೀಸರಿಗೆ ಪದೇ, ಪದೇ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ತೆಲಂಗಾಣದ ನಲ್ಗೊಂಡ ಪೊಲೀಸರು ಬಂಧಿಸಿದ್ದಾರೆ.

hariyali mutton curry 2

ಮಾರ್ಚ್ 18ರ ಶುಕ್ರವಾರ ರಾತ್ರಿ ಊಟದ ವೇಳೆ ತನಗೆ ಇಷ್ಟವಾದ ಮಟನ್ ಕರಿ ಮಾಡಲಿಲ್ಲ ಎಂಬ ಕಾರಣಕ್ಕೆ ನವೀನ್ ಮತ್ತು ಪತ್ನಿಯ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ನವೀನ್ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಪದೇ ಪದೇ ಕರೆ ಮಾಡಿದ್ದಾನೆ. ಇದನ್ನೂ ಓದಿ: ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನೇ ಕೊಂದ ಪಾಗಲ್ ಪ್ರೇಮಿ

POLICE JEEP

ಆರಂಭದಲ್ಲಿ ನವೀನ್ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಗೆ ಡಯಲ್ ಮಾಡಿ ಘಟನೆಯನ್ನು ವಿವರಿಸಿ ತನ್ನ ಹೆಂಡತಿಯ ವಿರುದ್ಧ ದೂರು ನೀಡಿದಾಗ, ನಿರ್ವಾಹಕರು ಮದ್ಯದ ಅಮಲಿನಲ್ಲಿ ಕರೆ ಮಾಡಿದ್ದಾನೆ ಎಂದು ಭಾವಿಸಿ ಸುಮ್ಮನಿದ್ದರು. ಆದರೆ ನಿರಂತರವಾಗಿ ಕರೆ ಮಾಡುತ್ತಿದ್ದರಿಂದ ಕರ್ತವ್ಯದಲ್ಲಿದ್ದ ಪೊಲೀಸ್ ತನ್ನ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.

ನಂತರ ನವೀನ್ ಅವರ ಮನೆಗೆ ಗಸ್ತು ಕಾರನ್ನು ಕಳುಹಿಸಿ ಪರಿಶೀಲನೆ ನಡೆಸಿದಾಗ ಸೋಮಾರಿಯಂತೆ ಮಲಗಿರುವ ಸ್ಥಿತಿಯಲ್ಲಿ ನವೀನ್‍ನನ್ನು ಕಂಡು ಪೊಲೀಸರು ಆತನನ್ನು ಮಲಗಲು ಬಿಟ್ಟು ಹೊರಟು ಹೋಗಿದ್ದರು. ಆದರೆ ಶನಿವಾರ ಬೆಳಗ್ಗೆ ಕಣಗಲ್ ಮಂಡಲದ ಚೆರ್ಲಾ ಗೌರಾರಂ ಗ್ರಾಮದಲ್ಲಿ ಪೊಲೀಸರು ಮತ್ತೆ ಆತನ ಮನೆ ತೆರಳಿ ನವೀನ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಮದುವೆ ದಿನದಂದೇ ಯುವತಿ ನೇಣಿಗೆ ಶರಣು – ತಾಳಿಕಟ್ಟಿ ಕಲ್ಯಾಣ ಮಂಟಪದಿಂದಲೇ ಕಾಲ್ಕಿತ್ತ ಯುವಕ

Share This Article
Leave a Comment

Leave a Reply

Your email address will not be published. Required fields are marked *