ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ

Public TV
2 Min Read
HOLLAYWOOD

ದ್ಯ ಪ್ರಿನ್ಸ್ ಹ್ಯಾರಿ ಪತ್ನಿಯಾಗಿರುವ, ಈ ಹಿಂದೆ ಖ್ಯಾತ ಹಾಲಿವುಡ್ ನಟಿಯಾಗಿದ್ದ ಮೇಘನ್ ಮಾರ್ಕೆಲ್ ಜೊತೆ ಸಲುಗೆ ಬೆಳೆಸಿಕೊಂಡು, ನಂತರ ಅನೈತಿಕ ಸಂಬಂಧ ಹೊಂದಿ, ಅವರೊಂದಿಗೆ ಸೆಕ್ಸ್ ಮಾಡಿದ್ದಾರೆ ಎಂದು ಹಾಲಿವುಡ್ ನಟ ಸೈಮನ್ ರೆಕ್ಸ್ ಹೇಳಿಕೊಂಡಿದ್ದಾರೆ ಎನ್ನಲಾದ ಗಾಸಿಪ್ ಹಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಸುದ್ದಿಗೆ ಹಲವು ರೆಕ್ಕೆಪುಕ್ಕಗಳು ಬೆಳೆದು, ಏನೆಲ್ಲ ಕಥೆಗಳನ್ನು ಕಟ್ಟಲಾಗಿತ್ತು. ಈ ಕುರಿತು ಸೈಮನ್ ರೆಕ್ಸ್ ಅವರೇ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ‘ಮೇಘನಾ ಮಾರ್ಕೆಲ್ ಜೊತೆ ಸೆಕ್ಸ್ ಮಾಡಿದ್ದೇನೆ ಎಂದು ಹೇಳಲು ತಮಗೆ 50 ಲಕ್ಷ ರೂಪಾಯಿ ಆಫರ್ ಮಾಡಲಾಗಿತ್ತು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

HOLLAYWOOD 1

ಮೇಘನಾ ಮಾರ್ಕೆಲ್ 2018ರಲ್ಲಿ ಪ್ರಿನ್ಸ್ ಹ್ಯಾರಿಯನ್ನು ಮದುವೆಯಾಗುವ ಮುನ್ನ ಜನಪ್ರಿಯ ಹಾಲಿವುಡ್ ತಾರೆಯಾಗಿದ್ದರು. ಯಶಸ್ಸಿನ ಉತ್ತುಂಗದಲ್ಲಿದ್ದರು. ಈ ಹಿನ್ನೆಲೆಯಲ್ಲಿ 2005ರಲ್ಲಿ ಈ ನಟಿಯ ಮಾನಹಾನಿಗೆ ಪ್ರಯತ್ನ ನಡೆಯಿತು. ಇದೇ ಸಮಯದಲ್ಲೇ ಸೈಮನ್ ರೆಕ್ಸ್ ಮತ್ತು ಸಿಟ್ಕಾಮ್ ಕಟ್ಸ್ನಲ್ಲಿ ಮೇಘನ್ ಜೊತೆ ಕಾಣಿಸಿಕೊಂಡಿದ್ದು ಭಾರೀ ಸುದ್ದಿ ಆಗಿತ್ತು. ಅಲ್ಲದೇ, ಇಬ್ಬರೂ ಡಿನ್ನರ್ ಮಾಡಿದ್ದಾರೆ ಎನ್ನುವುದು ಕೂಡ ಅವತ್ತಿನ ಹಾಟ್ ಟಾಪಿಕ್ ಆಗಿತ್ತು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ಗಾಳಿಸುದ್ದಿ ಹರಿಬಿಡಲಾಯಿತು. ಇದನ್ನೂ ಓದಿ: ಪ್ರಭಾಸ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ ಈ ಕರಾವಳಿ ಬ್ಯುಟಿ 

ಈ ಕುರಿತು ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಿದ್ದು, ಇದಕ್ಕೆ ನೇರವಾಗಿ ಈ ನಟ ಉತ್ತರಿಸಿರುವ ಸೈಮನ್, “ಆಗಷ್ಟೇ ಸಿನಿರಂಗಕ್ಕೆ ನಾನು ಪ್ರವೇಶ ಮಾಡಿದ್ದೆ. ನನಗೆ ತುಂಬಾ ಹಣಕಾಸಿನ ಸಮಸ್ಯೆ ಇತ್ತು. ಅದನ್ನು ಬಳಸಿಕೊಂಡು ನನಗೆ ಮೇಘನ್ ಜೊತೆ ಅನೈತಿಕ ಸಂಬಂಧ ಇದೆ ಎಂದು ಹೇಳುವಂತೆ ಕೆಲವರು ಒತ್ತಾಯಿಸಿದ್ದರು. ಅದಕ್ಕೆ ನನಗೆ ಟ್ಯಾಬಲೈಡ್ ಪತ್ರಿಕೆಯೊಂದು 50 ಲಕ್ಷ ಆಫರ್ ಸಹ ಕೊಡಲಾಗಿತ್ತು. ಆದರೆ ಆ ಸಮಯದಲ್ಲಿ ನಾನು ಸುಳ್ಳನ್ನು ಹೇಳಿಲ್ಲ” ಎಂದು ಸತ್ಯ ಬಾಯಿಬಿಟ್ಟಿದ್ದಾರೆ.

ನನಗೆ ನಿಜವಾಗಿಯೂ ಹಣದ ಅಗತ್ಯವಿತ್ತು. ಆದರೆ ಸುಳ್ಳು ಹೇಳಿಕೆಗಳನ್ನು ನೀಡಲು ನಾನು ಒಪ್ಪಲಿಲ್ಲ. ನಾನು ಹಾಗೂ ಮೇಘನ್ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದೇವೆ. ನಮ್ಮ ಗೆಳೆತನ ಅಷ್ಟಕ್ಕೆ ಸೀಮಿತವಾಗಿತ್ತು. ಈ ವಿಷಯವನ್ನು ನಾನು ಮೇಘನ್ ಜತೆ ಪ್ರಸ್ತಾಪ ಮಾಡಿದ್ದೇನೆ. ನಂತರ ಮೇಘನ್ ಅವರು ನನಗೆ ಧನ್ಯವಾದ ಪತ್ರವನ್ನು ಕಳುಹಿಸಿದ್ದರು. ಈಗಲೂ ಒಳ್ಳೆಯ ಜನರಿದ್ದಾರೆ ಎಂಬುದನ್ನು ತಿಳಿದು ಸಂತೋಷವಾಯಿತು ಎಂದು ಅವರು ಪತ್ರದಲ್ಲಿ ಬರೆದಿದ್ದರು ಎಂಬುದಾಗಿ ಸೈಮನ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು 

Share This Article
Leave a Comment

Leave a Reply

Your email address will not be published. Required fields are marked *