ತೋತಾಪುರಿ ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾದ ನಂತರ ಮತ್ತೆ ತಮ್ಮ ಪರಿಮಳ ಲಾಡ್ಜ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ವಿಜಯ್ ಪ್ರಸಾದ್. 2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದ ಇವರು, ಆನಂತರ ಈ ಪ್ರಾಜೆಕ್ಟ್ ಹಿಂದಕ್ಕಿಟ್ಟು ‘ಪೆಟ್ರೊಮ್ಯಾಕ್ಸ್’ ಸಿನಿಮಾ ಮಾಡಿದರು. ಇದೀಗ ಅವರ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಮತ್ತೆ ಅವರು ಪರಿಮಳ ಲಾಡ್ಜ್ ನತ್ತ ಮುಖ ಮಾಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ವಿಜಯ್ ಪ್ರಸಾದ್, ‘ತೋತಾಪುರಿ, ಪೆಟ್ರೋಮ್ಯಾಕ್ಸ್ ಆಯ್ತು, ಸದ್ಯದಲ್ಲೇ ಪರಿಮಳ ಲಾಡ್ಜ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!
2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಸಖತ್ ಡಬಲ್ ಮೀನಿಂಗ್ ಸಂಭಾಷಣೆಯಿಂದಾಗಿ ಸದ್ದು ಮಾಡಿತ್ತು. ಈ ಟೀಸರ್ ನಲ್ಲಿ ತಮ್ಮ ತಂಡವನ್ನು ನಿರ್ದೇಶಕ ವಿಜಯ್ ಪ್ರಸಾದ್ ವಿಭಿನ್ನವಾಗಿಯೇ ಪರಿಚಯ ಮಾಡಿಸಿದ್ದರು. ಲಾಡ್ಜ್ ಓನರ್ ಸ್ಕಂದ್ ಎಂಟರ್ ಟೇನ್ಮೆಂಟ್ (ಬ್ಯಾನರ್), ಲಾಡ್ಜ್ ನಲ್ಲಿ ಸಲಿಂಗಕಾಮಿಗಳು (ನಾಯಕ) ಲೂಸ್ ಮಾದ ಯೋಗಿ, ಲಾಡ್ಜನಲ್ಲಿ ಆಳ ನೋಡಿ, ಲಾಳ ಹೊಡ್ದವ್ರು (ತಾರಾಗಣ) ದತ್ತಣ್ಣ, ಸುಮನ್ ರಂಗನಾಥ್, ಹೇಮಾ ದತ್ತ್, ಲಾಡ್ಜನಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಗುನ್ನ ತಿಂದವ್ರು (ಸಿನಿಮಾಟೋಗ್ರಫಿ) ನಿರಂಜನ್ ಬಾಬು, ಲಾಡ್ಜನಲ್ಲಿ ಲಾಡಿ ಜೊತೆ ರಾಗಾನೂ ಎಳ್ದೆವ್ರು (ಸಂಗೀತ ನಿರ್ದೇಶನ) ಅನೂಪ್ ಸೀಳಿನ್, ಲಾಡ್ಜನಲ್ಲಿ ಕಾಸ್ ಬದ್ಲು ಕಾಂಡೋಮ್ ಇಟ್ಕೊಂಡವ್ರು (ನಿರ್ಮಾಪಕ) ಪ್ರಸನ್ನ, ಲಾಡ್ಜನಲ್ಲಿ ಕಾಚ ತೋರ್ಸಿ ಕಥೆ ಮಾಡ್ದವ್ರು (ನಿರ್ದೇಶಕ) ವಿಜಯ ಪ್ರಸಾದ್ ಹೀಗೆಯೇ ಪದಗಳನ್ನು ಬಳಸಿ ವಿಚಿತ್ರವಾದ ಮನರಂಜನೆ ಕೊಟ್ಟಿದ್ದರು. ಈಗ ಅದೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕರು.
ಸದ್ಯ ಬಿಡುಗಡೆ ಆಗಬೇಕಿರುವ ವಿಜಯ್ ಪ್ರಸಾದ್ ಅವರ ತೋತಾಪುರಿ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಿದ್ದರೆ, ಮತ್ತೊಂದು ಮಹತ್ವದ ಪಾತ್ರದಲ್ಲಿ ಡಾಲಿ ಧನಂಜಯ್ ಇದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬಂದಿದೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್
ಪೆಟ್ರೋಮ್ಯಾಕ್ಸ್ ಕೂಡ ಅತೀ ನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿದೆ. ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಕಾಂಬಿನೇಷನ್ ಮೊದಲ ಸಿನಿಮಾವಿದು. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು, ಸಖತ್ ಮನರಂಜನೆ ನೀಡುವಂತಹ ಅಂಶಗಳನ್ನು ಇದು ಒಳಗೊಂಡಿದೆ.