ಚೆನ್ನೈ: ತಮಿಳು ಸೂಪರ್ ಸ್ಟಾರ್ ವಿಜಯ್ ಅವರ ದುಬಾರಿ ಕಾರು ರೋಲ್ಸ್ ರಾಯಲ್ಸ್ ಅವರನ್ನು ಸಂಕಷ್ಟಕ್ಕೆ ದೂಡಿದೆ. ಆಮದು ಮಾಡಿಕೊಂಡಿರುವ ಈ ಕಾರಿನಿಂದಾಗಿ ಅವರು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
ವಿಜಯ್ ಅವರಿಗೆ ಈ ಹಿಂದೆ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಪ್ರವೇಶ ತೆರಿಗೆ ರೂ 1 ಲಕ್ಷ ಪಾವತಿಸಲು ತಮಿಳುನಾಡಿನ ವಾಣಿಜ್ಯ ತೆರಿಗೆ ಇಲಾಖೆಯು ಆದೇಶಿಸಿತ್ತು. ಆದರೆ ಅವರು ಅದನ್ನು ಪಾವತಿಸದಿದ್ದಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಹಾಗಾಗಿ ವಿಜಯ್ ಪರ ವಕೀಲರು ಶೇ.400 ಬದಲಿಗೆ ತಿಂಗಳಿಗೆ ಶೇ.2ರಷ್ಟು ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯು ನಟ ವಿಜಯ್ ಅವರಿಗೆ 2005ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಿಂದ ಆಮದು ಮಾಡಿಕೊಂಡ ತಮ್ಮ ರೋಲ್ಸ್ ರಾಯಲ್ಸ್‌ಗೆ ಪ್ರವೇಶ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿತ್ತು. ಆದರೆ ತೆರಿಗೆಯನ್ನು ವಜಾಗೊಳಿಸುವಂತೆ ವಿಜಯ್ ಪರವಾಗಿ ಮದ್ರಾಸ್ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ
ರಾಜ್ಯಗಳು ಪ್ರವೇಶ ತೆರಿಗೆಯನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿವೆ ಎಂದು ತಿಳಿದ ವಿಜಯ್ ಅವರು ಸೆಪ್ಟೆಂಬರ್ 2021 ರಲ್ಲಿ ರೂ 7,98,075 ಪ್ರವೇಶ ತೆರಿಗೆ ಪಾವತಿಸಿದ್ದಾರೆ. ಆದರೆ ವಾಣಿಜ್ಯ ತೆರಿಗೆ ಇಲಾಖೆಯು ಡಿಸೆಂಬರ್ 2005 ಮತ್ತು ಸೆಪ್ಟೆಂಬರ್ 2021ರ ನಡುವೆ ತೆರಿಗೆ ಪಾವತಿಸದಿದ್ದಕ್ಕಾಗಿ ರೂ 30,23,609 ದಂಡವನ್ನು ವಿಧಿಸಿದೆ.
ಮಾರ್ಚ್ 14, 2022 ರಂದು ನಡೆದ ವಿಚಾರಣೆಯಲ್ಲಿ, ವಿಜಯ್ ಪರ ವಕೀಲರು ‘ಕಾರನ್ನು ಆಮದು ಮಾಡಿಕೊಂಡ ಸಮಯದಿಂದ ತಿಂಗಳಿಗೆ ಶೇ.2 ರಷ್ಟು ದಂಡವನ್ನು ವಿಧಿಸುತ್ತಾ ಬಂದಿದೆ. ಆ ದಂಡದ ಮೊತ್ತ ಶೇ.400ರಷ್ಟು ಆಗಿದೆ. ಅಲ್ಲದೇ, ತೆರಿಗೆ ಪಾವತಿಯ ವಿಳಂಬಕ್ಕಾಗಿ ಮತ್ತೆ ಮತ್ತೆ ದಂಡ ಹಾಕುತ್ತಿದೆ. ಹಾಗಾಗಿ ಈ ಪ್ರಕರಣವನ್ನು ವಜಾಗೊಳಿಸಬೇಕೆಂದು ವಕೀಲರ ಮನವಿ ಮಾಡಿದ್ದರು. ಇದನ್ನೂ ಓದಿ: ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು..!
ಭಾರತದಲ್ಲಿನ ಆಮದು ತೆರಿಗೆಗಳು ವಿಶ್ವದಲ್ಲೇ ಅತಿ ದುಬಾರಿ. ಹಾಗಾಗಿ ಜನರು ಯಾವುದೇ ವಿಧಾನದಿಂದ ತೆರಿಗೆ ಕಟ್ಟುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ರೋಲ್ಸ್ ರಾಯಲ್ಸ್ ಹೊರ ದೇಶಗಳಲ್ಲಿ ಕೈಗೆಟುಕುವ ದರದ ಕಾರ್ ಆಗಿದ್ದರೂ ಸಹ, ಭಾರತದಲ್ಲಿ ಸುಮಾರು 5 ಕೋಟಿ ರೂಪಾಯಿಗಳಷ್ಟು ಪಾವತಿಸಬೇಕಾಗುತ್ತದೆ. ಆದ್ದರಿಂದ ಅಂತಹ ವಾಹನಕ್ಕೆ ಲಕ್ಷ ಲಕ್ಷ ಆಮದು ತೆರಿಗೆ ಭರಿಸಬೇಕಾಗುತ್ತದೆ.