ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿ

Public TV
1 Min Read
FotoJet 7 28

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ಬುರ್ಕಾ ಮಾನಸಿಕ ಗುಲಾಮಗಿರಿ ಎಂದು ತಿಳಿಸಿದ್ದಾರೆ. ಅವರ ಮಾತನ್ನು ಹೇಳುವವರು, ಒಮ್ಮೆ ಅಂಬೇಡ್ಕರ್ ಹೇಳಿರುವುದನ್ನು ಓದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಮಕ್ಕಳು ಒಂದೇ ಅನ್ನೋದಕ್ಕೆ ಹಿಜಬ್‍ನ್ನು ಶಾಲೆಗಳಲ್ಲಿ ಬ್ಯಾನ್ ಮಾಡಲಾಗಿದೆ. ಎಲ್ಲರೂ ಒಂದಾಗಿ ಕಲಿಯಬೇಕು ಎನ್ನುವುದು ಉದ್ದೇಶವಾಗಿದೆ ಎಂದು ತಿಳಿಸಿದರು.

Yadgiri hijab 2

ಸಾರ್ವಜನಿಕ ಸ್ಥಳದಲ್ಲಿ ಹಿಜಬ್, ಬುರ್ಕಾ ಬ್ಯಾನ್ ಮಾಡಿಲ್ಲ. ಫ್ರಾನ್ಸ್, ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಬುರ್ಕಾವನ್ನು ಬ್ಯಾನ್ ಮಾಡಲಾಗಿದೆ. ಭಾರತ ಆಗಲಿ, ಕರ್ನಾಟಕ ಆಗಲಿ ಹಿಜಬ್, ಬುರ್ಕಾವನ್ನು ಬ್ಯಾನ್ ಮಾಡಿಲ್ಲ ಎಂದರು. ಇದನ್ನೂ ಓದಿ: ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್‌ ಖಾನ್‌

ಕಾಶ್ಮೀರ ಫೈಲ್ಸ್ ಅನ್ನೋದು ಸತ್ಯದ ಘಟನೆ ಬಗ್ಗೆ ನಡೆದ ಚಿತ್ರವಾಗಿದೆ. ಮತಾಂಧತೆ ಕಳೆದುಕೊಂಡು ಹತ್ಯೆ ಮಾಡಿದ ಘಟನೆ ಈ ಸಿನಿಮಾದಲ್ಲಿದೆ. ಕುಶಸ್ಥಳ ಇಂದು ಪಾಕಿಸ್ತಾನಕ್ಕೆ ಸೇರಿದೆ. ಉಗ್ರ ನರಸಿಂಹನ ಮೂಲ ಸ್ಥಾನ ಮೌಲ್ತಾನ ಆಗಿದೆ. ಶಾರದೆ ಜನ್ಮಸ್ಥಳ ನಮ್ಮ ಬಳಿ ಇಲ್ಲ. ಈ ಕೆಟ್ಟ ಪರಿಸ್ಥಿತಿ ನಮ್ಮೊಳಗೂ ಬರಬಾರದು ಎಂದು ಕಳವಳ ವ್ಯಕ್ತಪಡಿಸಿದರು.

the kashmir files 1

ಹಿಜಬ್ ವಿಚಾರ ಬಹಳ ಸ್ಪಷ್ಟ ಇದೆ. ಅವರ ಮೂಗಿಗೆ ನೇರವಾಗಿ ತೀರ್ಪು ಬಂದರೆ ಸಂವಿಧಾನ ಬಗ್ಗೆ ಮಾತಾಡ್ತಾರೆ. ಹಿಂದೆ ಶಾಬಾನ ವಿಚಾರವಾಗಿ ತೀರ್ಪು ಬಂದಾಗ ಹೀಗೆ ಮಾಡಿದ್ದರು. ಅಂದಿನ ರಾಜೀವ್ ಗಾಂಧಿ ಸರ್ಕಾರ ಬೆದರಿಕೆಗೆ ಮಣಿದಿತ್ತು. ಇಂದು ಆ ರೀತಿ ಮಣಿಯೋದಿಲ್ಲ. ಈಗ ಇರೋದು ಬಿಜೆಪಿ ಸರ್ಕಾರ. ನಿಮ್ಮ ಅಜೆಂಡಾ ಈಗ ತರಬೇಡಿ. ಜಿನ್ನಾ ಅಜೆಂಡಾ ಈಗ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಹಾಗೂ ಜೇಮ್ಸ್ ನಡುವೆ ಹೋಲಿಕೆ ಮಾಡಿ ತಂದು ಹಾಕ್ಬೇಡಿ: ಸಿ.ಟಿ.ರವಿ

Share This Article
Leave a Comment

Leave a Reply

Your email address will not be published. Required fields are marked *