ಚಿಕ್ಕಮಗಳೂರು: ತಾಲೂಕಿನ ಲೋಕೋಪಯೋಗಿ ಇಲಾಖೆ ಅಸ್ಟಿಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (AEE) ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಪಾರ ಅಕ್ರಮ ಆಸ್ತಿಯನ್ನು ಸೀಜ್ ಮಾಡಿದ್ದಾರೆ.
ನಗರದ ಗಾಂಧಿ ಬಡವಾಣೆಯ ದೋಣಿಕಣದಲ್ಲಿರುವ ಅವರ ನಿವಾಸನಗರದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬೆಳ್ಳಂಬೆಳಗ್ಗೆಯಿಂದ ತನಿಖೆ ನಡೆಸಿದ್ದಾರೆ. ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಎಇಇ ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು-ಉಡುಪಿ ಎಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಈ ವೇಳೆ, ಮನೆಯಲ್ಲಿ ಐಶಾರಾಮಿ ಹೋಂ ಥಿಯೇಟರ್ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳು ಕೂಡ ಮನೆಯಲ್ಲಿ ಪತ್ತೆಯಾಗಿದೆ. 750 ಗ್ರಾಂ ಚಿನ್ನದ ಬಿಸ್ಕೇಟ್, 900 ಗ್ರಾಂ ಬೆಳ್ಳಿ, 2 ಲಕ್ಷದ 74 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳು ಪತ್ತೆಯಾಗಿವೆ. ಇದನ್ನೂ ಓದಿ: ಎಸಿಬಿಯವರನ್ನು ಬೀಗರೆಂದು ಭಾವಿಸಿದ ಕೆಲಸದಾಕೆ – ಡಸ್ಟ್‌ಬಿನ್, ಸಿಂಟೆಕ್ಸ್‌ನಲ್ಲೂ ಕಾಂಚಾಣ
ಜೊತೆಗೆ ಬೇರೆ-ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಿರುವ ಬಗ್ಗೆಯೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಗವಿರಂಗಪ್ಪನವರ ಸ್ವಂತ ಊರಾದ ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದಲ್ಲೂ ಸಾಕಷ್ಟು ಆಸ್ತಿ ಮಾಡಿ, ಫಾರ್ಮ್ ಹೌಸ್ ನಿರ್ಮಿಸಿಕೊಂಡಿದ್ದಾರೆ. ತಮ್ಮ ಸಂಬಂಧಿಕರ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಇಂದು ದಿನ ಪೂರ್ತಿ ತನಿಖೆ ನಡೆಸಿದ್ದು, ನಾಳೆಯೂ ಕೂಡ ದಾಳಿ ಮುಂದುವರಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಜಪಾನ್‌ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ – ಸುನಾಮಿ ಎಚ್ಚರಿಕೆ