ಮಲ್ಪೆ ಬಂದರಿನಲ್ಲಿ ಬಲೆಗೆ ಬಿತ್ತು 250 ಕೆ.ಜಿಯ ಗರಗಸ ಮೀನು..!

Public TV
1 Min Read
CARPENTER SHARK

ಉಡುಪಿ: ಅತ್ಯಂತ ಅಪರೂಪದ ಗರಗಸ ಮೀನು (Sawfish) ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆ ಬಿದ್ದಿದೆ. ಇದನ್ನು ಇಂಗ್ಲಿಷ್ ನಲ್ಲಿ ಕಾರ್ಪೆಂಟರ್ ಶಾರ್ಕ್ (Carpenter Shark) ಎಂದು ಕರೆಯಲಾಗುತ್ತಿದೆ. ಈ ವಿಶೇಷ ಮೀನನ್ನು ನೋಡಲು ಜನಸಮೂಹವೇ ಸ್ಥಳದಲ್ಲಿ ನೆರೆದಿತ್ತು.

ಬಲೆಗೆ ಬಿದ್ದ ಸುಮಾರು 250 ಕೆ.ಜಿಯ ಈ ಮೀನನ್ನು ಬೋಟಿನಲ್ಲಿ ಬಂದರಿಗೆ ತರಲಾಗಿತ್ತು. ನಂತರ ಅಲ್ಲಿಂದ ಕ್ರೇನ್ ಮೂಲಕ ಎತ್ತಲಾಯಿತು. ಬಳಿಕ ಲಾರಿ ಮೂಲಕ ಮಂಗಳೂರಿಗೆ ಸಾಗಿಸಲಾಯಿತು. ಮೀನಿನ ಮುಖದ ಭಾಗದಲ್ಲಿ ಗರಗಸದಂತೆ ಹೋಲುವ ಉದ್ದದ ಅಲಗು ಇದ್ದು, ನೋಡಲು ಜನಸಾಗರವೇ ಸ್ಥಳದಲ್ಲಿ ಜಮಾಯಿಸಿತ್ತು. ಇದನ್ನೂ ಓದಿ: DCC ಬ್ಯಾಂಕ್‌ನಲ್ಲಿ ಕಳ್ಳತನ- 4.37ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣ ವಶ

ಹಲವು ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಅವುಗಳು ವೈರಲ್ ಆಗಿವೆ. ಈ ಅಪರೂಪದ ಮೀನುಗಳು ಆಳಸಮುದ್ರದಲ್ಲಿ ಮಾತ್ರ ಇರುತ್ತವೆ. ಸದ್ಯ ಈ ಮೀನುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಲಾಗುತ್ತಿದೆ. ಶಾರ್ಕ್ ಜಾತಿಯ ಮೀನುಗಳಲ್ಲಿ ಇದು ಕೂಡ ಒಂದಾಗಿದ್ದು, ನೋಡಲು ತುಂಬಾನೇ ಆಕರ್ಷಕವಾಗಿರುತ್ತವೆ.

Share This Article
Leave a Comment

Leave a Reply

Your email address will not be published. Required fields are marked *