ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

Public TV
1 Min Read
RAVINDRA JADEGA 1 1

ದುಬೈ: ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ಐಸಿಸಿಯ ನೂತನ ಟೆಸ್ಟ್ ಆಲ್‍ರೌಂಡರ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.

RAVINDRA JADEGA 2

ಇಂದು ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ರ‍್ಯಾಂಕಿಂಗ್‌ನ ಆಲ್‍ರೌಂಡರ್ ವಿಭಾಗದಲ್ಲಿ ಜಡೇಜಾ 406 ಅಂಗಳೊಂದಿಗೆ ನಂಬರ್ 1 ಸ್ಥಾನ ಪಡೆದಿದ್ದಾರೆ. ಜಡೇಜಾ ಬಳಿಕ ಜೇಸನ್ ಹೋಲ್ಡರ್ ಇದ್ದು, 382 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

RAVINDRA JADEGA 1

ಜಡೇಜಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್‍ನಲ್ಲಿ 175 ರನ್ ಮತ್ತು ಬೌಲಿಂಗ್‍ನಲ್ಲಿ 9 ವಿಕೆಟ್ ಕಿತ್ತು ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಬಳಿಕ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡು ನಂಬರ್ 1 ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಜೇಸನ್ ಹೋಲ್ಡರ್ 2021ರ ಫೆಬ್ರವರಿ ಬಳಿಕ ಆಲ್‍ರೌಂಡರ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರು. ಇದೀಗ ಜಡೇಜಾ ನಂಬರ್ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ ಶಭಾಷ್ ಮಿಥು ಚಿತ್ರದ ಪೋಸ್ಟರ್ ಹಂಚಿಕೊಂಡ ತಾಪ್ಸಿ ಪನ್ನು

ಜಡೇಜಾ ಈ ಹಿಂದೆ 2017ರಲ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ನಂಬರ್ 1 ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಮತ್ತೆ ರ‍್ಯಾಂಕಿಂಗ್‌ನ ಪ್ರಗತಿ ಕಂಡು ನಂಬರ್ 1 ಆಲ್‍ರೌಂಡರ್ ಆಗಿ ಜಡೇಜಾ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *