BollywoodCinemaCricketLatestMain PostNationalSports

ಮಹಿಳಾ ದಿನಾಚರಣೆ ಪ್ರಯುಕ್ತ ಶಭಾಷ್ ಮಿಥು ಚಿತ್ರದ ಪೋಸ್ಟರ್ ಹಂಚಿಕೊಂಡ ತಾಪ್ಸಿ ಪನ್ನು

ಮುಂಬೈ: ಅಂತರಾಷ್ಟೀಯ ಮಹಿಳಾ ದಿನಾಚರಣೆ ನಿಮಿತ್ಯ ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಮುಂಬರುವ ಶಭಾಷ್ ಮಿಥು ಚಿತ್ರದ ಪೋಸ್ಟರ್‍ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ತಾರೆ ಮಿಥಾಲಿ ರಾಜ್ ಅವರು ನನ್ನಂತಹ ಲಕ್ಷಾಂತರ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಅಂತಹ ಲಕ್ಷಾಂತರ ಮಹಿಳೆಯರ ಮಧ್ಯೆ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಅವರನ್ನು ಅನುಸರಿಸಲು ಇದೊಂದು ಸರಿಯಾದ ಮಾರ್ಗವಾಗಿದೆ. ಈ ಮಹಿಳಾ ದಿನದಂದು ನಾನು ಶೌರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲ ಮಹಿಳೆಯರಿಗೂ ಹುರಿದುಂಬಿಸುತ್ತಿದ್ದೇನೆ. #ಶಭಾಷ್‍ಮಿಥು #ಶಭಾಷ್‍ಮಹಿಳೆ #ಶಭಾಷ್‍ನಿಮಗೆ ಎಂದು ಶಿರ್ಷೀಕೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

 

View this post on Instagram

 

A post shared by Taapsee Pannu (@taapsee)

ತಮ್ಮ ಹೊಸ ಪೋಸ್ಟರ್‌ನಲ್ಲಿ ತಾಪ್ಸಿ ಮಿಥಾಲಿ ಎಂದು ಬರೆದ ನೀಲಿ ಜರ್ಸಿವೊಂದನ್ನು ಧರಿಸಿದ್ದಾರೆ. ಅವರು ಒಂದು ಕೈಯಲ್ಲಿ ಬ್ಯಾಟ್ ಮತ್ತು ಇನ್ನೊಂದು ಕೈಯಲ್ಲಿ ಹೆಲ್ಮೆಟ್ ಹಿಡಿದುಕೊಂಡು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

ಇದಕ್ಕೂ ಮುನ್ನ ಚಿತ್ರದ ನಿರ್ಮಾಪಕರು ತಾಪ್ಸಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಪೋಸ್ಟರ್‌ನಲ್ಲಿ, ಅವರು ನೀಲಿ ಜರ್ಸಿಯನ್ನು ಧರಿಸಿದ್ದು ಚೆಂಡನ್ನು ಬೌಂಡರಿ ಲೈನಿಗಟ್ಟುವ ದೃಶ್ಯದ ಫೋಟೋ ಇದಾಗಿದೆ.

 

View this post on Instagram

 

A post shared by Taapsee Pannu (@taapsee)

ಶಭಾಷ್ ಮಿಥು ಚಿತ್ರವು ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರವು ಮಿಥಾಲಿ ರಾಜ್ ಅವರ ಜೀವನದ ಏರಿಳಿತಗಳು, ಹಿನ್ನಡೆಗಳು ಮತ್ತು ಅವರ ಜೀವನದ ಕೆಲ ಘಟ್ಟಗಳನ್ನೊಳಗೊಂಡಿದೆ. ಚಿತ್ರದಲ್ಲಿ ಬಾಲಿವುಡ್ ನಟ ವಿಜಯ್ ರಾಝ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದು ಚಿತ್ರದ ಕಥೆಯನ್ನು ಪ್ರಿಯಾ ಅವೆನ್ ಅವರು ಬರೆದಿದ್ದಾರೆ.

Leave a Reply

Your email address will not be published.

Back to top button