7000 ರಷ್ಯಾ ಯೋಧರ ಸಾವು: ಉಕ್ರೇನ್ ಅಧ್ಯಕ್ಷ

Public TV
1 Min Read
Volodymyr Zelensky 1

ಕೀವ್: ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿ ವಾರವೇ ಕಳೆದಿದೆ. ಯುದ್ಧ ಸಾರಿದ ದೇಶವೇ 7,000 ಯೋಧರನ್ನು ಕಳೆದುಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

ರಷ್ಯಾ ಪಡೆ ಉಕ್ರೇನ್ ಪ್ರಮುಖ ನಗರಗಳನ್ನು ವಷಕ್ಕೆ ಪಡೆದುಕೊಂಡಿದ್ದರೂ ಅವರು ದಿಕ್ಕು ದೆಸೆ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಇದೀಗ ನಾವು ಅವರಿಗೆ ತಿರುಗೇಟು ನೀಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!

ನಾವು ಕೇವಲ 1 ವಾರದಲ್ಲಿ ಶತ್ರುಗಳ ಯೋಜನೆಯನ್ನು ಬುಡಮೇಲು ಮಾಡಿದ್ದೇವೆ. ನಮ್ಮದೇ ಜನರ ಮೇಲೆ ವಿಷ ಬೀಜ ಬಿತ್ತಿ ದೇಶದ ವಿರುದ್ಧ ನಿಲ್ಲುವಂತೆ ರಷ್ಯಾ ಮಾಡಿತ್ತು. ನಮ್ಮ ಜನರಲ್ಲಿ ಸಹೃದಯತೆ ಹಾಗೂ ಸ್ವತಂತ್ರತೆಗಳೆಂಬ ಎರಡು ವಿಚಾರಗಳಿವೆ ಎಂದು ತಿಳಿಸಿದರು. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಲ್ಲಿ ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ: ಮೋದಿ

ನಾವೀಗ ರಷ್ಯಾದ ಸೈನಿಕರನ್ನು ನಿಯಂತ್ರಿಸುತ್ತಿದ್ದೇವೆ. ಭದ್ರತಾ ಪಡೆ, ಸಿಬ್ಬಂದಿ, ಸ್ಥಳೀಯರು ಎಲ್ಲರೂ ಸೇರಿ ಅವರನ್ನು ಸೆರೆ ಹಿಡಿದು ಅವರಿಗೆ ನಾವು ತಿರುಗೇಟು ನೀಡುತ್ತಿದ್ದೇವೆ. ಅವರು ಏಕೆ ಇಲ್ಲಿದ್ದಾರೆ ಎಂಬ ಬಗ್ಗೆ ಗೊಂದಲ ಹೊಂದಿದ್ದಾರೆ. ಅವರು ಸಂಖ್ಯೆಯಲ್ಲಿ ನಮಗಿಂತ 10 ಪಟ್ಟು ಹೆಚ್ಚಿದ್ದರೂ ಅವರಲ್ಲಿ ಶಕ್ತಿಯಿಲ್ಲ ಎಂದು ಝೆಲೆನ್ಸ್ಕಿ ರಷ್ಯಾದ ಯೋಧರನ್ನು ವ್ಯಂಗ್ಯ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *