ವಾಷಿಂಗ್ಟನ್: ರಷ್ಯಾದ ಹಲವಾರು ಯುದ್ಧನೌಕೆಗಳು ಕ್ರೈಮಿಯಾವನ್ನು ತೊರೆದು ಒಡೆಸ್ಸಾಗೆ ಹೋಗುತ್ತಿವೆ. ಅಲ್ಲದೇ ಉಕ್ರೇನ್‍ನ ಮೂರನೇ ಅತಿದೊಡ್ಡ ನಗರದ ಮೇಲೆ ಯುದ್ಧ ನೌಕೆಯಿಂದಲೂ ದಾಳಿ ನಡೆಸಬಹುದು ಎಂದು ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಮುಂಜಾನೆ ಖರ್ಸನ್ ನಗರವನ್ನು ರಷ್ಯಾ ಪಡೆಗಳು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದಾದ ಬಳಿಕ ಕ್ರೈಮಿಯಾ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ 8 ನೇ ದಿನದಂದು, ಕ್ರೈಮಿಯಾದಿಂದ ರಷ್ಯಾದ ಯುದ್ಧನೌಕೆಗಳು ಈಗ ಉಕ್ರೇನಿಯನ್ ನಗರವಾದ ಒಡೆಸ್ಸಾ ಕಡೆಗೆ ಚಲಿಸುತ್ತಿವೆ ಎಂದು ಯುಎಸ್ ಅಧಿಕಾರಿಯೊಬ್ಬರು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಎಲೆಕ್ಷನ್ ಟಿಕೆಟ್ ವಿಚಾರ- ಗೃಹ ಸಚಿವರು ಹೇಳಿದ್ದೇನು..?
ಇಂದು ಮುಂಜಾನೆ ರಷ್ಯಾದ ಪಡೆಗಳು ಬಂದರು ನಗರವಾದ ಖರ್ಸನ್ ಅನ್ನು ವಶಪಡಿಸಿಕೊಂಡಿದೆ. ಆದರೆ ಇದನನು ಉಕ್ರೇನ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದಾದ ಬಳಿಕ ಇದೀಗ ರಷ್ಯಾದ ಪಡೆಗಳು ಕಪ್ಪು ಸಮುದ್ರದ ಬಳಿ ಒಡೆಸ್ಸಾ ಬಂದರು ನಗರವನ್ನು ಆಕ್ರಮಿಸಲು ಯೋಜಿಸುತ್ತಿವೆ ಎಂದು ತಿಳಿಸಿದ್ದಾರೆ.