ಎಸ್‍ಪಿ ಆಡಳಿತದಲ್ಲಿ ಉತ್ತರ ಪ್ರದೇಶ ಅಪರಾಧ ಪ್ರಕರಣಗಳಲ್ಲಿ ನಂಬರ್ 1 ಆಗಿತ್ತು : ಅಮಿತ್ ಶಾ

Public TV
2 Min Read
amith shah 1

ಲಕ್ನೋ: ಸಮಾಜವಾದಿ ಪಕ್ಷ (ಎಸ್‍ಪಿ) ಆಡಳಿತದಲ್ಲಿ ಉತ್ತರ ಪ್ರದೇಶವು ಅಪರಾಧ ಪ್ರಕರಣಗಳಲ್ಲಿ ನಂಬರ್ 1 ಆಗಿತ್ತು ಎಂದು ಅಖಿಲೇಶ್ ಯಾದವ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಎಸ್‍ಪಿಯನ್ನು ಗುರಿಯಾಗಿಸಿ ಬಲಿಯಾದಲ್ಲಿ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ಅವರ ಸರ್ಕಾರದ ಅವಧಿಯಲ್ಲಿ ಉತ್ತರ ಪ್ರದೇಶವು ಲೂಟಿ, ಕೊಲೆ ಮತ್ತು ಅತ್ಯಾಚಾರದಂತಹ ಅಪರಾಧಗಳಲ್ಲಿ ನಂಬರ್ 1 ಆಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಗೌರವದಿಂದ ನೋವಾಗಿದೆ: ಬಿಜೆಪಿ ಸೇರ್ಪಡೆಯಾದ ಗುಲಾಂ ನಬಿ ಸೋದರಳಿಯ

web bjp logo 1538503012658

ಯಾದವ್ ಯುಪಿಗಾಗಿ ಕೆಲಸ ಮಾಡಲಿಲ್ಲ. ಎಸ್‍ಪಿ ಆಡಳಿತವಿದ್ದಾಗ ಲೂಟಿಗಳು, ಕೊಲೆಗಳು, ಅತ್ಯಾಚಾರಗಳಲ್ಲಿ 1 ಆಗಿತ್ತು. ಅಖಿಲೇಶ್ ಯಾದವ್ ಅವರೇ ನಿಮಗೆ ನಾಚಿಕೆಯಾಗಬೇಕು. ನೀವು ಜನರ ಬಳಿ ಬಂದು ಮತ ಕೇಳಲು ಯಾವ ಮುಖವನ್ನು ಇಟ್ಟುಕೊಂಡು ಬರುತ್ತೀರಾ. ನೀವು ಜನರಿಗೆ ಏನೂ ಮಾಡಿಲ್ಲ. ಯೋಗಿ ಜಿ ನಾಯಕತ್ವದಲ್ಲಿ, ಲೂಟಿಯಲ್ಲಿ 70% ಕುಸಿತ, ಕೊಲೆಗಳಲ್ಲಿ 29% ಕುಸಿತವಾಗಿದೆ ಎಂದರು.

Yogi

ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಹೊಗಳಿದ ಅವರು, ಯೋಗಿ ಅವರು ಮಾಫಿಯಾಗಳಿಂದ ರಾಜ್ಯವನ್ನು ಈಗಾಗಲೇ ಮುಕ್ತಗೊಳಿಸಿದ್ದಾರೆ. ಈ ಹಿಂದೆ ಸರ್ಕಾರಿ ಭೂಮಿಯನ್ನು ಬಾಹುಬಲಿಗಳು ಕಿತ್ತುಕೊಂಡಿದ್ದರು. ದಲಿತರು, ಹಿಂದುಳಿದವರು, ಎಲ್ಲರೂ ವಂಚಿತರಾಗಿದ್ದರು. ಈ ಪರಿವಾರವಾದಿಗಳು ತಮ್ಮ ಅಧಿಕಾರ ಅವಧಿಯಲ್ಲಿ ಬಡವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಿಜೆಪಿಯು ಭೂಮಾಫಿಯಾಗಳಿಂದ ಜನರ ಭೂಮಿಯನ್ನು ಮುಕ್ತಗೊಳಿಸಿದೆ ಎಂದು ಹೇಳಿದರು.

akilesh yadava

ಈ ಹಿಂದೆ ಉತ್ತರ ಪ್ರದೇಶಕ್ಕೆ ಮೊಹರಂ ಹಬ್ಬದಂದು ವಿದ್ಯುತ್ ಬರುತ್ತಿತ್ತು. ಆದರೆ ಪರಶುರಾಮ ಜಯಂತಿ, ಶ್ರೀರಾಮ ನವಮಿ ಮತ್ತು ಶ್ರೀಕೃಷ್ಣ ಜನ್ಮೋತ್ಸವದಂದು ವಿದ್ಯುತ್ ಪೂರೈಕೆ ಇರಲಿಲ್ಲ ಎಂದು ಸಿಡಿದರು.

ರಾಜ್ಯದಲ್ಲಿ ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾಲ್ಕು ಹಂತದ ಮತದಾನವು ಅದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.

congress logo 1

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಳೆಯ ಪಕ್ಷವು ಎಪ್ಪತ್ತರ ದಶಕದಲ್ಲಿ ‘ಗರೀಬಿ ಹಟಾವೋ’ ಘೋಷಣೆಯನ್ನು ನೀಡಿತ್ತು. ಆದರೆ ಬಡವರನ್ನು ಮರೆತೆ ಹೋದರು. ಅವರು ಬಡತನವನ್ನು ತೊಡೆದುಹಾಕಲು ಸಾಧ್ಯವಾಗಲಿಲ್ಲ. ಆದರೆ ಬಡ ಜನರನ್ನು ಹೋಗಲಾಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಮೋದಿ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಉತ್ತರ ಪ್ರದೇಶದಲ್ಲಿ ಇಂದು ಐದನೇ ಹಂತದ ಮತದಾನ ನಡೆಯುತ್ತಿದ್ದು, ಮಾರ್ಚ್ 3 ಮತ್ತು ಮಾರ್ಚ್ 7 ರಂದು ಕೊನೆಯ ಎರಡು ಹಂತಗಳು ನಡೆಯಲಿವೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *