ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

Public TV
2 Min Read
hypothyroidism weight loss

ಡೀ ದಿನ ಕುಳಿತೇ ಕೆಲಸ ಮಾಡುವುದರಿಂದ ಬೊಜ್ಜು ಬಂದು, ತೂಕದಲ್ಲಿ ಹೆಚ್ಚಾಗಿ ಆರೋಗ್ಯದಲ್ಲೂ ಅನೇಕ ವ್ಯತ್ಯಾಸ ಕಾಣುತ್ತೇವೆ. ಕೆಲವೊಬ್ಬರಿಗೆ ಈ ದೇಹ ತೂಕ ಮುಜುಗರ ಉಂಟು ಮಾಡುತ್ತವೆ. ಇದರಿಂದಾಗಿ ಇದನ್ನು ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಆದರೆ ತೂಕ ಇಳಿಸಲು ಹೋಗಿ ಪೋಷಕಾಂಶ ಕೊರತೆಯಿಂದ ಅನೇಕ ರೋಗಗಳಿಗೆ ನಾಂದಿಯಾಗುತ್ತದೆ. ಆದರೆ ಮನೆಯಲ್ಲೇ ಸುಲಭವಾಗಿ ಕೆಲವು ಆರೋಗ್ಯಪೂರ್ಣವಾದ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ತೂಕದಲ್ಲಿ ಗಣನೀಯ ಇಳಿಕೆಯನ್ನು ಕಾಣಬಹುದು.

Vegetable Juice

ಸೋಂಪು: ಸೋಂಪು ಚಯಾಪಚಯಗಳು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಉಬ್ಬುವಿಕೆ ಸಮಸ್ಯೆ ಇದ್ದವರಿಗೆ ಇದು ರಾಮಬಾಣವಾಗಿದೆ. ಇಷ್ಟೇ ಅಲ್ಲದೇ ತೂವನ್ನು ಅತೀ ವೇಗವಾಗಿ ಕಡಿಮೆಗೊಳಿಸಲು ಇದು ಸಹಾಯ ಮಾಡುತ್ತದೆ. ಪ್ರತಿನಿತ್ಯ ಒಂದು ಚಮಚ ಸೋಂಪನ್ನು ನೀರಿನಲ್ಲಿ ರಾತ್ರಿ ನೆನೆಸಬೇಕು. ಬೆಳಗ್ಗೆ ಆ ಮಿಶ್ರಣವನ್ನು ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

fennel seeds

ಗ್ರೀನ್ ಟೀ: ನೀವು ಸಾಮಾನ್ಯವಾಗಿ ಕುಡಿಯುವ ಚಹಾ ಬದಲಿಗೆ ಗ್ರೀನ್ ಟೀಯನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ. ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಗಣನೀಯವಾಗಿ ತೂಕವನ್ನು ಇಳಿಸಬಹುದು. ಕೊಬ್ಬನಾಂಶವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು

green tea 1

ಲೆಮನ್ ವಾಟರ್: ತೂಕ ಇಳಿಕೆಗೆ ನಿಂಬೆ ಹಣ್ಣು ಸಹಾಯಕವಾಗಿದ್ದು, ನಿಂಬೆ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣವು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯಕವಾಗಿದೆ. ಜೊತೆಗೆ ಇದು ದೇಹಕ್ಕೆ ಆಕಾರವನ್ನು ತರುತ್ತದೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ನಿಂಬೆ ರಸ ಹಾಕುವ ಮೂಲಕ ಕುಡಿಯಿರಿ. ಆಗ ನಿಮ್ಮ ತೂಕದಲ್ಲಿ ವ್ಯತ್ಯಾಸ ಕಾಣಬಹುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

lemon water

ತರಕಾರಿ ಜ್ಯೂಸ್: ಡಯಟ್ ಮಾಡುವವರಿಗೆ ತರಕಾರಿ ಜ್ಯೂಸ್‍ಗಳನ್ನು ಹೆಚ್ಚು ಕುಡಿಯಲು ಜಿಮ್ ಟ್ರೇನರ್‍ಗಳು ಸಲಹೆ ನೀಡುತ್ತಾರೆ. ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತದೆ. ಕ್ಯಾರೆಟ್, ಬೀಟ್ರೂಟ್, ಹಾಗಲಕಾಯಿಯಂತಹ ತರಕಾರಿ ರಸವು ಪೌಷ್ಟಿಕಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

black tea

ಬ್ಲ್ಯಾಕ್ ಕಾಫಿ: ಬ್ಲ್ಯಾಕ್ ಕಾಫಿಯನ್ನು ಸೇವಿಸುವುದದರಿಂದ ಎನರ್ಜಿಯನ್ನು ಹೆಚ್ಚಿಸುತ್ತದೆ. ನೀವು ವರ್ಕೌಟ್‍ಗಳನ್ನು ಮುಗಿಸಿದ ನಂತರ ಬ್ಲ್ಯಾಕ್ ಕಾಫಿಯನ್ನು ಕುಡಿದರೆ ಒಳ್ಳೆಯದು. ಇದರಿಂದ ಗಣನೀಯವಾಗಿ ತೂಕ ಇಳಿಕೆಯಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *