ಮಂಡ್ಯ: ಸಕ್ಕರೆ ನಾಡಿನಲ್ಲಿ ಬೆಳಗಿನ ಜಾವ 4 ಗಂಟೆಗೆ ಸ್ಟಾರ್ ಗ್ರೂಪ್ಸ್ ಮಾಲೀಕ ಮತ್ತು ಅವರ ಸಹೋದರರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉದ್ಯಮಿ ಅಮಿರುಲ್ ಮುರ್ತುಜಾ ಸೇರಿದಂತೆ ಅಮ್ಜಾ, ಶಹಬಾಜ್, ಶಿರೋಜ್ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಮಿರುಲ್ ಅವರ ಸಹೋದರರು ನಾಗಮಂಗಲದ ಪ್ರಖ್ಯಾತ ಉದ್ಯಮಿಗಳಾಗಿದ್ದಾರೆ. ಸ್ಟಾರ್ ಗ್ರೂಪ್ಸ್ ಹೆಸರಿನಲ್ಲಿ ಪೌಲ್ಟ್ರಿ ಫಾರ್‍ಂ, ಹೋಟೆಲ್, ಪೆಟ್ರೋಲ್ ಉದ್ಯಮ ಸೇರಿದಂತೆ ಹಲವಾರು ಉದ್ಯಮ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೃತೀಯಲಿಂಗಿ
ನಸುಕಿನ 4 ಗಂಟೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಅಧಿಕಾರಿಗಳು 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಆಸ್ತಿ-ಪಾಸ್ತಿ, ಕಡತ, ಹಣ, ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ