ಶಾಂತಿ ಭಂಗ ಮಾಡುವ ನಿಮ್ಮನ್ನು ಜನರು ಎಂದೆಂದಿಗೂ ಕ್ಷಮಿಸುವುದಿಲ್ಲ: ಕಾಂಗ್ರೆಸ್‌ ವಿರುದ್ಧ ಸಿಎಂ ಕಿಡಿ

Public TV
1 Min Read
BASAVARJ BOMMAI 1 1

ಬೆಂಗಳೂರು: ಕಾಂಗ್ರೆಸ್‍ನವರ ಗದ್ದಲದ ವಾತಾವರಣದಿಂದ ಶಿವಮೊಗ್ಗದಲ್ಲಿ ಕೊಲೆಯಾಗಿದೆ. ಈ ಕೊಲೆಗೆ ಯಾರು ಕಾರಣ? ಇಂತಹ ಸಂದರ್ಭದಲ್ಲಿ ವಿಪಕ್ಷವಾಗಿ ಹೇಗೆ ನಡೆದುಕೊಳ್ಳಬೇಕು? ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ ಸಿಎಂ ಕಾಂಗ್ರೆಸ್ ಧರಣಿಯಿಂದ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಶಾಂತಿ ಭಂಗ ಮಾಡುವ ನಿಮ್ಮನ್ನು ಜನರು ಎಂದೆಂದಿಗೂ ಕ್ಷಮಿಸುವುದಿಲ್ಲ. ಪ್ರಕ್ಷುಬ್ಧ ವಾತಾವರಣ ಸರಿಪಡಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆಕ್ರೋಶ ಭರಿತರಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ

BASAVARJ BOMMAI 6

ಕಾಂಗ್ರೆಸ್ ಪಕ್ಷದವರು ನಾವು ಏನು ಮಾಡುತ್ತೇವೆ ಎಂದು ಕೇಳಬೇಕಾಗಿತ್ತು. ಹತ್ತು ಹಲವು ಮುನ್ನೋಟ ಪ್ರಗತಿ ಸಾಧಿಸುವ ವಿಶ್ವಾಸ ನಮಗಿದೆ. ಅತ್ಯಂತ ಬೇಜವಾವ್ದಾರಿ ವಿರೋಧ ಪಕ್ಷ ಕಾಂಗ್ರೆಸ್. ರಾಜ್ಯದ ಜನರ ಘನತೆಯೂ ಗೊತ್ತಿಲ್ಲ, ಸದನದ ಘನತೆಯೂ ಗೊತ್ತಿಲ್ಲ. ಈಶ್ವರಪ್ಪ ಯಾವುದನ್ನೂ ಹೇಳಿಲ್ಲ. ಆದರೆ ಅದನ್ನು ಕಾಂಗ್ರೆಸ್ ನವರು ದೊಡ್ಡ ವಿಷಯವಾಗಿ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಮುಂದುವರಿದ ಕಾಂಗ್ರೆಸ್ ಗದ್ದಲ – ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ

ರಾಜ್ಯದ ಜನತೆಯ ಹಿತಾಸಕ್ತಿ ವಿರುದ್ಧವಾಗಿದೆ. ಜನರಿಗೆ ಕಾಂಗ್ರೆಸ್ ದ್ರೋಹ ಮಾಡುತ್ತಿದ್ದಾರೆ. ನಾವು ಏನು ಮಾಡಿದ್ದೇವೆ ಅದರ ಮೇಲೆ ಜನರ ಬಳಿ ಹೋಗುತ್ತೇವೆ ಎಂದು ಸಭಾ ನಿರ್ಣಯದ ಪ್ರತಿ ಮಂಡಿಸುತ್ತಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *