ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಚಿತ್ರಮಂದಿರದ ಮುಂದೆ ಅಭಿಮಾನಿಗೆ ಹೊಡೆದ ಎನ್ನುವ ಕಾರಣಕ್ಕಾಗಿ ಕನ್ನಡದ ಯುವ ನಟ ಧನ್ವೀರ್ ಗೌಡ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಘಟನೆ ನಡೆದು ಇನ್ನೂ 48 ಗಂಟೆ ಕಳೆದಿಲ್ಲ ಅಷ್ಟರಲ್ಲಿ ಹುಬ್ಬಳ್ಳಿಯಲ್ಲಿ ಯುವಕರ ಗುಂಪೊಂದು ಧನ್ವೀರ್ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ : ಶಬ್ದ ಚಿತ್ರದ ವಿಭಿನ್ನ ಪಾತ್ರದಲ್ಲಿ ಮೇಘನಾ ರಾಜ್ : ನಿರ್ದೇಶಕ ಕಾಂತ ಹೇಳಿದ್ದೇನು?
ಒಂದು ಗುಂಪು ಧನ್ವೀರ್ ವಿರುದ್ಧ ಮಾತಿನ ದಾಳಿಗೆ ಇಳಿದರೆ, ಮತ್ತೊಂದು ಗುಂಪು ಧನ್ವೀರ್ ರಕ್ಷಣೆ ನಿಂತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ತೆರಳಿದ್ದ ಅವರು, ಅನಿರೀಕ್ಷಿತ ದಾಳಿಗೆ ಹೈರಾಣಾಗಿದ್ದಾರೆ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ
ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿರುವುದು ಮತ್ತೊಂದು ಸುತ್ತಿನ ಚಕಮಕಿಗೆ ಕಾರಣವಾಗಿದೆ. ಧನ್ವೀರ್ ದಾಳಿಯ ಹಿಂದೆ ಇಬ್ಬರು ಸ್ಟಾರ್ ನಟರ ಕೈವಾಡ ಇದೆಯಂದು, ಈ ಯುವ ನಟನ ಗೆಲುವನ್ನು ಸಹಿಸಲಾಗದ ಆ ನಟರು ಈ ರೀತಿಯಲ್ಲಿ ದಾಳಿ ಮಾಡಿಸುತ್ತಿದ್ದಾರೆ ಎಂಬ ಪೋಸ್ಟ್ ಗಳು ಆಯಾ ಅಭಿಮಾನಿಗಳ ಗ್ರೂಪ್ ನಲ್ಲಿ ಹರಿದಾಡುತ್ತಿವೆ. ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕೂಡ ಈ ವಿಷಯದಲ್ಲಿ ಒಬ್ಬರಿಗೊಬ್ಬರು ಕೆಸರೆರಿಚುವ ಕೆಲಸಕ್ಕೂ ಮುಂದಾಗಿದ್ದಾರೆ. ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive
ಈ ಎಲ್ಲ ನಡೆಗಳು ಅಭಿಮಾನಿಗಳ ಅತಿರೇಕ ಮತ್ತು ನಟರ ವರ್ತನೆ ಕುರಿತು ಚಿತ್ರೋದ್ಯಮದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಈ ರೀತಿಯ ಅಪಪ್ರಚಾರ ಮಾಡುವವರು ವಿರುದ್ಧ ಕ್ರಮ ತಗೆದುಕೊಳ್ಳಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅನೇಕರು ಸಲಹೆ ನೀಡಿದ್ದಾರೆ.