ಸಿಎಂಗೆ ಸ್ವಾಭಿಮಾನ ಇದ್ದರೆ ಬಚ್ಚಲು ಬಾಯಿ ಈಶ್ವರಪ್ಪರನ್ನು ವಜಾ ಮಾಡಲಿ: ಡಿಕೆಶಿ

Public TV
1 Min Read
dk shivkumar

ಬೆಂಗಳೂರು: ಸಿಎಂಗೆ ಸ್ವಾಭಿಮಾನ ಇದ್ದಿದ್ದರೆ ಈ ಬಚ್ಚಲು ಬಾಯಿಯ ಈಶ್ವರಪ್ಪರನ್ನು ವಜಾ ಮಾಡಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ಯಾವ ಪಕ್ಷದವರು ಯಾವ ರೀತಿ ಮಾತನಾಡುತ್ತಿದ್ದಾರೆ ಎಂದು ಜನರು ಗಮನಿಸುತ್ತಿದ್ದಾರೆ. ನಿನ್ನೆ ಖರ್ಗೆಯವರು ಬಂದು ಬೆಂಬಲ ಕೊಟ್ಟರು. ಬೇರೆ ರಾಜ್ಯಗಳಿಂದಲೂ ಕರೆ ಬರುತ್ತಿವೆ. ಕರ್ನಾಟಕದ ಕಾಂಗ್ರೆಸ್ ಶಾಸಕರು ಒಳ್ಳೇ ಕೆಲಸ ಮಾಡ್ತಿದ್ದಾರೆ. ಧರಣಿ ಮಾಡುತ್ತಿರುವುದು ಒಳ್ಳೆಯದು ಎಂದು ಬೇರೆ ರಾಜ್ಯಗಳ ರಾಜಕಾರಣಿಗಳು ಹೇಳುತ್ತಿದ್ದಾರೆ ಎಂದು ಖರ್ಗೆ ಹೇಳಿದರು. ಈಶ್ವರಪ್ಪ ಹೇಳಿಕೆಗೆ ಎಲ್ಲೆಡೆ ವಿರೋಧ ಬರುತ್ತಿದೆ ಎಂದರು.

KARGE

ಸಿಂಗಾಪುರ ಪಿಎಂ ಕೇಂದ್ರ ಸರ್ಕಾರದ ಬಗ್ಗೆ ಮಾತಾಡಿದ್ದಾರೆ. ಬೇರೆ ಬೇರೆ ದೇಶಗಳಿಂದ ಕೇಂದ್ರದ ನಡೆ ಬಗ್ಗೆ ಟೀಕೆ ಬರುತ್ತಿದೆ. ಈಶ್ವರಪ್ಪ ಹೇಳಿಕೆ ವೈಯಕ್ತಿಕ ಅಲ್ಲ. ನಮ್ಮ ಹೋರಾಟ ಮುಂದುವರೆಯಲಿದೆ. ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದರು.

BASAVARJ BOMMAI 2 1

ನಿರಾಣಿ ಸಿಎಂ ಆಗುತ್ತಾರೆ ಎಂದು ಈಶ್ವರಪ್ಪ ಹೇಳಿದಾಗಲೇ ಅವರನ್ನು ಸಿಎಂ ವಜಾ ಮಾಡಬೇಕಿತ್ತು. ಯಡಿಯೂರಪ್ಪ ವಿರುದ್ಧವೇ ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಟ್ಟರು. ಈಶ್ವರಪ್ಪ ಯಾರಿಗೂ ನಿಷ್ಠರಾಗಿಲ್ಲ. ನಾಳೆ ನಮ್ಮ ಎಲ್ಲಾ ಕಾರ್ಯಕರ್ತರೂ ತಹಶೀಲ್ದಾರ್‌ರಿಗೆ ಮನವಿ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು

eshwarappa 1

ದೆಹಲಿಯಲ್ಲಿ ವರಿಷ್ಠರ ಜೊತೆ ಸಭೆ ಇದೆ. ಎಲ್ಲರ ಜೊತೆ ಹೋಗಿ ದೆಹಲಿಯಲ್ಲಿ ಮಾತುಕತೆ ಮಾಡಬೇಕು ಎಂದು ನಿರ್ಧರಿಸಿದ್ದೆವು. ಪಾದಯಾತ್ರೆಗೂ ಮುನ್ನ ದೆಹಲಿಯಲ್ಲಿ ಸಭೆ ಇದೆ. ಹತ್ತು ಹದಿನೈದು ಜನ ನಾಯಕರು ಹೋಗುತ್ತೇವೆ. ನಮ್ಮ ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

congress logo 1

ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಡಾ. ರಂಗನಾಥ್ ಅವರು ವಿಧಾನಸಭೆ ಮೊಗಸಾಲೆಯಲ್ಲಿ ಭಾನುವಾರ ಬೆಳಗ್ಗೆ ದಿನಪತ್ರಿಕೆ ವಾಚನದಲ್ಲಿ ನಿರತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *