ನಟನೆಯಲ್ಲಿ ಸದ್ಯ ಬ್ಯುಸಿಯಾಗಿರುವ ಹಲವು ನಟರು ಮುಂದಿನ ದಿನಗಳಲ್ಲಿ ನಿರ್ದೇಶನಕ್ಕೂ ಮುಂದಾಗಲಿದ್ದಾರೆ. ಹಾಗಾಗಿ ಅಂದುಕೊಂಡಂತೆ ಆದರೆ, ಈ ವರ್ಷದಲ್ಲಿ ನಿರ್ದೇಶಕರ ಜತೆ ನಟ ಕಂ ನಿರ್ದೇಶಕರ ಪೈಪೋಟಿ ಶುರುವಾಗಲಿದೆ. ಈ ವರ್ಷದಲ್ಲಿ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಇದನ್ನೂ ಓದಿ : ಕರ್ನಾಟಕದಲ್ಲಿ ಹಿಜಬ್ ವಿವಾದ ಬೆನ್ನಲ್ಲೇ ಸ್ವರಾ ಭಾಸ್ಕರ್ ಟ್ರೋಲ್
ಸಲ್ಮಾನ್ ಖಾನ್ ಗೆ ಕಿಚ್ಚ ಡೈರೆಕ್ಷನ್
ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಮುಂದಾಗಲಿದ್ದಾರೆ ಎನ್ನುವ ಸುದ್ದಿ ಗಾಂಧಿ ನಗರದಲ್ಲಿ ಕೆಲ ತಿಂಗಳಿಂದ ಹರಿದಾಡುತ್ತಲೇ ಇದೆ. ಈಗ ಅದು ನಿಕ್ಕಿ ಆದಂತೆ ಕಾಣುತ್ತಿದೆ. ಕಿಚ್ಚನ ಅಡ್ಡದಿಂದ ಬಂದ ಮಾಹಿತಿಯ ಪ್ರಕಾರ, ಈ ಬಾರಿ ಅವರು ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಸಲ್ಮಾನ್ ಜತೆ ಒಂದು ಸುತ್ತಿನ ಮಾತುಕಥೆ ಕೂಡ ನಡೆದಿದೆ. ಮೊದಲ ಹಂತದ ಕಥೆಯನ್ನು ಸಲ್ಮಾನ್ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ನಟಿಸಿದರೆ, ದಕ್ಷಿಣದ ಉಳಿದ ಭಾಷೆಗಳಲ್ಲಿ ಸ್ವತಃ ಕಿಚ್ಚ ಅವರೇ ಅಭಿನಯಿಸಲಿದ್ದಾರೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?
ಎರಡನೇ ಚಿತ್ರಕ್ಕೆ ದುನಿಯಾ ವಿಜಯ್ ಸಿದ್ಧತೆ
ಸಲಗದ ಯಶಸ್ಸಿನ ಗುಂಗಿನಲ್ಲಿರುವ ದುನಿಯಾ ವಿಜಯ್ ಸದ್ಯ ತೆಲುಗು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಬಾಲಯ್ಯ ಅವರ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ನಡುವೆಯೇ ದುನಿಯಾ ವಿಜಯ್, ತಮ್ಮ ನಿರ್ದೇಶನದ ಎರಡನೇ ಸಿನಿಮಾದ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಅವರು ಮಾಸ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಶಿವರಾತ್ರಿ ಹೊತ್ತಿಗೆ ಚಿತ್ರಕ್ಕೆ ಚಾಲನೆ ಸಿಗಲಿದೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ
ನಟನೆಯ ಜತೆಗೆ ನಿರ್ದೇಶನ ಎಂದ ರಕ್ಷಿತ್ ಶೆಟ್ಟಿ
ಸದ್ಯ ಚಾರ್ಲಿ 777 ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿರುವ ರಕ್ಷಿತ್ ಶೆಟ್ಟಿ, ಇದೇ ವರ್ಷ ‘ರಿಚರ್ಡ್ ಆಂಟನಿ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶನದ ಜತೆ ಜತೆಗ ಈ ಸಿನಿಮಾದಲ್ಲಿ ಅವರು ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ಕಥೆ ಬರೆಯುವುದರಲ್ಲಿ ಚಿತ್ರತಂಡ ತೊಡಗಿದೆ. ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರೆದ ಕಥೆಯಿದಾಗಿದ್ದು, ಈ ವರ್ಷದಲ್ಲೇ ಸಿನಿಮಾ ಬರಲಿದೆಯಂತೆ. ಇದನ್ನೂ ಓದಿ :ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ
ಮೈ ನೇಮ್ ಇಸ್ ಸಿದ್ದೇಗೌಡನಿಗೆ ಸತೀಶ್ ನೀನಾಸಂ ಆ್ಯಕ್ಷನ್ ಕಟ್
ಮ್ಯಾಟ್ನಿ, ಪೆಟ್ರೋಮ್ಯಾಕ್ಸ್, ದಸರಾ ಸೇರಿದಂತೆ ಹಲವು ಚಿತ್ರಗಳ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸತೀಶ್ ನೀನಾಸಂ ಎರಡು ವರ್ಷಗಳ ಹಿಂದೆಯೇ “ಮೈ ನೇಮ್ ಇಸ್ ಸಿದ್ಧೇಗೌಡ’ ಸಿನಿಮಾ ಅನೌನ್ಸ್ ಮಾಡಿದ್ದರು. ಈ ಸಿನಿಮಾದ ಟೈಟಲ್ ಕೂಡ ಲಾಂಚ್ ಆಗಿದೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ
ಈ ವರ್ಷಕ್ಕೆ ನಟಿಸಬೇಕಾದ ಚಿತ್ರಗಳು ಮುಗಿದರೆ, ಮೈ ನೇಮ್ ಇಸ್ ಸಿದ್ಧೇಗೌಡ ಚಿತ್ರಕ್ಕೆ ಸತೀಶ್ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶನದ ಜತೆ ಜತೆಗೆ ನಟನೆಯನ್ನೂ ಮಾಡಲಿದ್ದಾರೆ.