ನವದಂಪತಿ ಜೊತೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಹಣ, ಬಂಗಾರ ಕದ್ದು ಪರಾರಿ

Public TV
1 Min Read
wedding

ಭೋಪಾಲ್: ವೇದಿಕೆಗೆ ಹೋಗಿ ಮದುಮಕ್ಕಳ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿದ್ದ ಖತರ್ನಾಕ್ ಕಳ್ಳನೊಬ್ಬ ಮಂಟಪದಿಂದ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು  ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್‍ನೊಂದಿಗೆ ಪರಾರಿಯಾಗಿದ್ದಾನೆ. ಶನಿವಾರ ರಾತ್ರಿ ಗ್ವಾಲಿಯರ್ನ ಝಾನ್ಸಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಂಗಮ್ ವಾಟಿಕಾ ಮದುವೆ ಉದ್ಯಾನದಲ್ಲಿ ಈ ಘಟನೆ ಸಂಭವಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳ್ಳನ ಈ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಊಟ, ತಿಂಡಿ ಸಪ್ಲೈಗೆ ಬಂತು ರೋಬೋ – ಮೈಸೂರಿನ ಜನತೆಯ ಮನಗೆದ್ದ ಸಪ್ಲೇಯರ್ ಲೇಡಿ

wedding 1 1

ಕ್ರೈಂ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‍ಪಿ) ರಾಜೇಶ್ ದಂಡೋಟಿಯಾ ಮಾತನಾಡಿ, ಮದುವೆ ಉದ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಂದ ವೀಡಿಯೋವನ್ನು ಸಂಗ್ರಹಿಸಲಾಗಿದೆ. ಈ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.  ಇದನ್ನೂ ಓದಿ: ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಅವಘಡ – ವಿದ್ಯುತ್ ಉತ್ಪಾದನೆ ಸ್ಥಗಿತ

POLICE JEEP

ಸಿಸಿ ಟಿವಿಯಲ್ಲಿ ಸೆರೆಯಾದ ವೀಡಿಯೋದಲ್ಲಿ ಏನಿದೆ?: ಕಪ್ಪು ಬಟ್ಟೆಯನ್ನು ಧರಿಸಿದ್ದ ವ್ಯಕ್ತಿ ಮದುವೆ ಮನೆಗೆ ಬಂದಿದ್ದಾನೆ. ನವ ದಂಪತಿಯ ಜೊತೆಗೆ ಫೋಟೋ ತೆಗೆಸಿಕೊಳ್ಳಲು ವೇದಿಕೆ ಮೇಲೆ ಬಂದಿದ್ದಾನೆ. ಈ ವೇಳೆ ಅಲ್ಲಿದ್ದ ಬಗ್ಯಾನ್ನು ಹೊತ್ತುಯ್ಯದಿದ್ದಾನೆ. ಈ ವಿಡಿಯೋ ಫೂಟೇಜ್‍ನಲ್ಲಿ ಅವನ ಮುಖ ಕಾಣುತ್ತಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವನು ಮದುವೆ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಬ್ಯಾಗ್‍ನಲ್ಲಿ 1 ಲಕ್ಷ ರೂ. ನಗದು ಮತ್ತು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿತ್ತು ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *