ಹೈದರಾಬಾದ್: ಕೇಂದ್ರ ಬಿಜೆಪಿ ಸರ್ಕಾರದ ಯಾವ ಪಿತೂರಿ, ತಂತ್ರಗಾರಿಕೆಗೂ ನಮ್ಮ ತೆಲಂಗಾಣ ಸರ್ಕಾರ ಬಲಿಯಾಗುವುದಿಲ್ಲ. ಆ ಸರ್ಕಾರವನ್ನೇ ಕಿತ್ತೊಗೆಯುತ್ತೇವೆ. ಕೇಂದ್ರ ಬಿಜೆಪಿ ಸರ್ಕಾರದ ಯಾವ ಬೆದರಿಕೆಗಳಿಗೂ ಬಗ್ಗುವುದಿಲ್ಲ, ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಾಗ್ಧಾಳಿ ಮಾಡಿದ್ದಾರೆ.
ಜನಗಾಂವ್‍ನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಷ್ಟ್ರಮಟ್ಟದಲ್ಲಿ ಹೋರಾಡಿ ಗುಣಾತ್ಮಕ ಬದಲಾವಣೆಗಳನ್ನು ತರುತ್ತೇನೆ. ನಮ್ಮ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಮೋದಿ ಸರ್ಕಾರ ಮುಂದಾಗದೆ ಇದ್ದರೆ, ನಾವೂ ಸುಮ್ಮನೆ ಇರುವುದಿಲ್ಲ. ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ಒಂದೇ ತರ ನೋಡಿ, ಸಮಸ್ಯೆಗಳನ್ನು ಬಗೆಹರಿಸುವ ಇನ್ನೊಬ್ಬ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ಧಾರೆ.
ತೆಲಂಗಾಣ ಜನರ ಆಶೀರ್ವಾದವಿದ್ದರೆ ನಾನು ಏನೂ ಮಾಡಲು ಸಿದ್ಧವಾಗಿದ್ದೆನೆ. ರಾಷ್ಟ್ರಮಟ್ಟದ ರಾಜಕೀಯದಲ್ಲಿ ಹೋರಾಡುತ್ತೇನೆ. ಜನರು ನನ್ನ ಬೆನ್ನ ಹಿಂದೆ ಇದ್ದು, ಬೆಂಬಲ ನೀಡಿದರೆ ಆ ದೆಹಲಿ ಕೋಟೆಯನ್ನೂ ನಾನು ಬೇಧಿಸಬಲ್ಲೆ ಎಂದು ಹೇಳಿದ ಕೆ.ಚಂದ್ರಶೇಖರ್ ರಾವ್, ಕೃಷಿ ಸುಧಾರಣೆ ಹೆಸರಲ್ಲಿ ಮೋದಿ ಸರ್ಕಾರ ಕೃಷಿ ಪಂಪ್‍ಸೆಟ್‍ಗಳಿಗೂ ವಿದ್ಯುತ್ ಮೀಟರ್ ಅಳವಡಿಸಲು ಯತ್ನಿಸುತ್ತಿದೆ. ಆದರೆ ನೀವು ನನ್ನನ್ನು ಕೊಂದರೂ ನಾನು ವಿದ್ಯುತ್ ಮೀಟರ್ ಅಳವಡಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
ಈ ರಾಜ್ಯದ ಜನರಿಗೆ ಕುಡಿಯಲು ಮತ್ತು ನೀರಾವರಿಗೆ ಸಾಕಷ್ಟು ನೀರು ಒದಗಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದ್ದೆನೆ. ತೆಲಂಗಾಣ ಅಭಿವೃದ್ಧಿಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗುವುದಿಲ್ಲ ಎಂದಿದ್ದಾರೆ.