ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ, ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ: ಸಿದ್ದರಾಮಯ್ಯ

Public TV
1 Min Read
Siddaramaiah

ಮೈಸೂರು: ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ರಾಜ್ಯ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. 4 ಲಕ್ಷದ 57 ಸಾವಿರ ಕೋಟಿ ಸಾಲ ಮಾಡಿದ್ದಾರೆ. ನಾನಿದ್ದಾಗ 2 ಲಕ್ಷದ 15 ಸಾವಿರ ಕೋಟಿ ಸಾಲ ಇತ್ತು. ಇವರು ಮೂರು ವರ್ಷದಲ್ಲಿ ಇದರ ಡಬಲ್ ಸಾಲ ಮಾಡಿದ್ದಾರೆ. ಇವರಿಂದ ಜನಪರ ಬಜೆಟ್ ನಿರೀಕ್ಷೆ ಹೇಗೆ ಸಾಧ್ಯ? ಸಾಮಾನ್ಯವಾಗಿ ರಾಜ್ಯಪಾಲರು ಇವರು ಬರೆದುಕೊಟ್ಟಿದ್ದನ್ನು ಭಾಷಣ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

money web

ಕೇಂದ್ರ ಸರ್ಕಾರಕ್ಕೆ ಕೇಳುವ ಧಮ್ ರಾಜ್ಯದ ಯಾರಿಗೂ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಷೇರು ಅನುದಾನ ಕಡಿಮೆಯಾಗಿದೆ. ಕೇಂದ್ರದ ಯೋಜನೆಗೆ 70% ಪರ್ಸೆಂಟ್ ಕೊಡುತ್ತಿದ್ದರು. ಈಗ ಕೇಂದ್ರದ ಯೋಜನೆಗೆ 50 – 50 ಕೊಡಬೇಕು. ಜಿಎಸ್‍ಟಿ ಪರಿಹಾರ 20 ಸಾವಿರ ಕೋಟಿ ರೂ. ಬಾಕಿ ಇದೆ. ನಿರ್ಮಲಾ ಸೀತಾರಾಂ ಇಲ್ಲಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ಯಾರಿಗೂ ಮೋದಿಯನ್ನು ಕೇಳುವ ಧೈರ್ಯವೇ ಇಲ್ಲ. ಮೋದಿ ಏನು ಮಾಡದೇ ಲೋಕಸಭೆಯಲ್ಲಿ ಭಾಷಣ ಮಾಡುತ್ತಾರೆ.ಮೋದಿ ದೇಶ ಹಾಳು ಮಾಡುತ್ತಿದ್ದಾರೆ. ಮೋದಿಯಿಂದ ದೇಶ ದಿವಾಳಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

Nirmala Sitharaman

 

ಕೇಂದ್ರಕ್ಕೆ 135 ಲಕ್ಷ 87 ಸಾವಿರ ಕೋಟಿ ಸಾಲ ಇದೆ. ಈಗ 11 ಲಕ್ಷದ 59 ಸಾವಿರ ಕೋಟಿ ಸಾಲ ಮಾಡುವುದಾಗಿ ಹೇಳಿದ್ದಾರೆ. ಕೇಂದ್ರ 9 ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದೆ. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಅಚ್ಚೇ ದಿನ್ ಆಯೆಂಗೆ ಇದೇನಾ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಶೌಚಾಲಯಕ್ಕೆ ಹೋಗಿ ಬರುತ್ತೇನೆಂದ ವಧು ಪ್ರೀಯಕರನ ಜೊತೆಗೆ ಎಸ್ಕೇಪ್

Share This Article
Leave a Comment

Leave a Reply

Your email address will not be published. Required fields are marked *