ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್

Public TV
2 Min Read
Nelson Dilipkumar Rajinikanth

ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನೀಕಾಂತ್ ಅವರ 169ನೇ ಚಿತ್ರಕ್ಕೆ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಜನೀಕಾಂತ್ ಅವರು ಭಾರತೀಯ ಚಿತ್ರರಂಗದ ಅತಿದೊಡ್ಡ ನಟ. ರಜನಿ ಸಿನಿಮಾ ನೋಡಲು ಹಲವು ಜನರು ತಮ್ಮ ಕೆಲಸಗಳಿಗೆ ರಜೆ ಹಾಕುವುದು, ಅವರ ಸಿನಿಮಾಗಾಗಿ ವರ್ಷಗಟ್ಟಲೇ ಕಾಯುವುದು ಸಾಮಾನ್ಯ. ಇವರ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಧೂಳ್ ಎಬ್ಬಿಸುತ್ತೆ. ರಜನಿ ಸಿನಿಮಾ ನಿರ್ದೇಶಿಸಬೇಕು ಎಂಬುದು ಪ್ರತಿಯೊಬ್ಬ ನಿರ್ದೇಶಕರ ಕನಸು. ಈಗ ಆ ಚಾನ್ಸ್ ಯುವ ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಅವರಿಗೆ ಸಿಕ್ಕಿದೆ. ಇದನ್ನೂ ಓದಿ: ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ

Nelson Dilipkumar Rajinikanth 1

ಮೂಲಗಳ ಪ್ರಕಾರ, ‘ಅಣ್ಣಾತ್ತೆ’ ಸಿನಿಮಾ ನಂತರ ರಜನಿ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗೆ ನೆಲ್ಸನ್ ಅವರು ಜೊತೆಯಾಗುತ್ತಿದ್ದಾರೆ. ಚಿತ್ರಕಥೆಯನ್ನು ನೆಲ್ಸನ್ ತುಂಬಾ ಸೊಗಸಾಗಿ ಬರೆದಿದ್ದು, ಕುತೂಹಲ ಮೂಡಿಸುವಂತಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣವನ್ನು ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ಸಿನಿಮಾವನ್ನು ಡಿಸೆಂಬರ್ 2022 ರಿಂದ ಫೆಬ್ರವರಿ 2023 ಬಳಗೆ ರಿಲೀಸ್ ಮಾಡುವ ಯೋಚನೆ ಇದೆ ಎಂಬುದು ಸಹ ತಿಳಿದುಬಂದಿದೆ.

rajanikanth

ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಅನಿರುದ್ಧ್ ಅವರು ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಇನ್ನು ಯಾವುದೇ ಹೆಸರನ್ನು ಇಟ್ಟಿಲ್ಲ. ಅಲ್ಲದೆ ಇದು ರಜನಿಯ 169ನೇ ಸಿನಿಮಾವಾಗಿದ್ದು, ಚಿತ್ರರಂಡಕ್ಕೆ ಹೆಚ್ಚು ಜವಾಬ್ದಾರಿ ಇದೆ. ಈ ಸಿನಿಮಾದ ಚಿತ್ರೀಕರಣವು ಬೇಸಿಗೆಯಲ್ಲಿ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದುಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಬೇಕು. ಇದನ್ನೂ ಓದಿ: ಪ್ರೀತಂ ಜೊತೆ ಇಷ್ಟು ವರ್ಷ ಏಕೆ ಕೆಲಸ ಮಾಡಿಲ್ಲ – ಮೌನಮುರಿದ ಸೋನು ನಿಗಮ್

rajanikanth 1

ಈ ವರ್ಷ ರಜನಿ ನಟನೆಯ ‘ಅಣ್ಣಾತ್ತೆ’ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ರಂಜಿಸಿತ್ತು. ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದು, ಕೌಟುಂಬಿಕ ಸಿನಿಮಾವಾಗಿತ್ತು. ಸಿನಿಮಾದಲ್ಲಿ ತಂಗಿ ಸೆಂಟಿಮೆಂಟ್ ಇದ್ದು, ರಜನಿ ತಂಗಿ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಟಿಸಿ ಸೈ ಎನಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *