ಬೆಳಗಾವಿ: ಕುಂದಾನಗರಿಯಲ್ಲಿ ಮತ್ತೊಂದು ಸಹಕಾರಿ ಸಂಘದ ಅಕ್ರಮ ಬೆಳಕಿಗೆ ಬಂದಿದ್ದು, ಮೃತ ವ್ಯಕ್ತಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಷತ್ತಿನ ಸಹಕಾರಿ ಸಂಘದಲ್ಲಿ ಅಕ್ರಮ ನಡೆದಿದೆ. ಆಡಳಿತ ಮಂಡಳಿಯಿಂದಲೇ 3.27 ಕೋಟಿ ರೂಪಾಯಿ ದುರುಪಯೋಗ ಪಡಿಸಿಕೊಂಡಿರುವುದು ಬಯಲಾಗಿದೆ. ಮೃತ ವ್ಯಕ್ತಿಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ 30 ಸಾಲದ ಖಾತೆ ಸೃಷ್ಟಿಸಿ ವಂಚಿಸಿದೆ. ಸಂಘದ ಮಾಜಿ ಅಧ್ಯಕ್ಷ ನಾತಾಜಿ ಪಾಟೀಲ್ ಸೇರಿ 17 ಜನರ ವಿರುದ್ಧ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್
ವಂಚನೆ ಕುರಿತು ಹಾಲಿ ಸಂಘದ ಕಾರ್ಯದರ್ಶಿ ಸುರೇಶ್ ವಡ್ಡರ್ ಅವರು ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಎಸಿಬಿ ದಾಳಿ ಬೆನ್ನಲ್ಲೇ ನಾತಾಜೀ ಪಾಟೀಲ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಅವ್ಯವಹಾರವು 2015 ಜೂನ್ 1ರಿಂದ 2020 ಅ.18ರ ನಡುವಿನ ಅವಧಿಯಲ್ಲಿ ನಡೆದಿದೆ.ಇದನ್ನೂ ಓದಿ: ಅಪ್ಪು ಸಮಾಧಿ ಮುಂದೆ ಕಣ್ಣೀರಿಟ್ಟ ಶಕ್ತಿಧಾಮದ ಮಕ್ಕಳು
ಸಹಕಾರಿ ಇಲಾಖೆಯ ಅಡಿಟ್ ಸಂದರ್ಭದಲ್ಲಿ ಸದಸ್ಯರಿಂದ ಸಂಗ್ರಹಿಸಿದ ಹಣ ಕಾನೂನುಬಾಹಿರವಾಗಿ ಬಳಕೆ ಮಾಡಿದ್ದು ಬೆಳಕಿಗೆ ಬಂದಿದೆ. ಮಾಜಿ ಅಧ್ಯಕ್ಷ ನಾತಾಜಿ ಪಾಟೀಲ್ ಸೇರಿ 17 ಜನರಿಗೆ ಬಂಧನದ ಭೀತಿ ಎದುರಾಗಿದೆ.
/p>