ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್

Public TV
1 Min Read
Nitesh Rane

ಮುಂಬೈ: ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾದ ಬಿಜೆಪಿ ಶಾಸಕ ನಿತೇಶ್ ರಾಣೆಗೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್‌ಬಿ ರೋಟೆ ಅವರು ರಾಣೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಕಳೆದ ಡಿಸೆಂಬರ್ 2021ರಲ್ಲಿ ಸಿಂಧುದುರ್ಗ ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶಿವಸೇನಾ ಕಾರ್ಯಕರ್ತ ಸಂತೋಷ್ ಪರಬ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಪ್ರಕರಣವನ್ನು ದಾಖಲಿಸಲಾಗಿತ್ತು.

nitesh rane 1

ಪ್ರಕರಣ ಸಂಬಂಧಿಸಿ ರಾಣೆಯನ್ನು 10 ದಿನಗಳ ಕಾಲ ಬಂಧಿಸದಂತೆ ಸುಪ್ರೀಂ ಕೋರ್ಟ್ ಕಳೆದ ಗುರುವಾರ ಮಹಾರಾಷ್ಟ್ರ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಶಾಸಕ ನಿತೇಶ್ ರಾಣೆ ಬಂಧನದ ಪೂರ್ವ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡುವಾಗ ಸುಪ್ರೀಂ ಕೋರ್ಟ್ ಮುಂದೆ ನಿಯಮಿತ ಜಾಮೀನು ಪಡೆಯಲು ಕೇಳಿಕೊಂಡಿದ್ದರು. ಇದಕ್ಕೂ ಮೊದಲು, ಬಾಂಬೆ ಹೈಕೋರ್ಟ್ ಜನವರಿ ೧೭ ರಂದು ಪ್ರಕರಣದಲ್ಲಿ ನಿತೇಶ್ ರಾಣೆಗೆ ಪೂರ್ವ ಬಂಧನ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನೂ ಓದಿ: UP Election: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲಿಲ್ಲ ಅಪರ್ಣಾ ಯಾದವ್ ಹೆಸರು

nitesh rane 2

ಕಳೆದ ತಿಂಗಳು ರಾಜ್ಯ ಶಾಸಕಾಂಗ ಸಂಕೀರ್ಣದ ಹೊರಗೆ ಅವಮಾನ ಮತ್ತು ನೋವನ್ನು ಅನುಭವಿಸಿದ ಶಾಸಕ ರಾಣೆ ಮಹಾರಾಷ್ಟ್ರದ ಸರ್ಕಾರ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಅನೇಕ ಬಾರಿ ಹೇಳಿಕೆ ನೀಡಿದ್ದರು. ರಾಣೆ ಕುಟುಂಬವು ಈ ಮೊದಲು ಶಿವಸೇನೆಯೊಂದಿಗೆ ದೀರ್ಘಕಾಲ ಸಂಬಂಧ ಹೊಂದಿತ್ತು. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

Share This Article
Leave a Comment

Leave a Reply

Your email address will not be published. Required fields are marked *