ಬಿಸಿ ಬಿಸಿ ಕಾಫಿ ಮಾಡುವ ಸರಳ ವಿಧಾನ ನಿಮಗಾಗಿ

Public TV
1 Min Read
CAPPUCCINO COFFEE 3

ಲವರಿಗೆ ಬೆಳಗ್ಗೆ ಬಿಸಿ ಬಿಸಿಯಾದ ಕಾಫಿ ಕುಡಿದು ದಿನವನ್ನು ಪ್ರಾರಂಭ ಮಾಡುವ ಹವ್ಯಾಸ ಇರುತ್ತದೆ. ಕಾಫಿ ಪ್ರಿಯರಿಗೆ ಬಹಳ ಸೊಗಸಾದ ಅಷ್ಟೇ ರುಚಿಕರವಾದ ಜೊತೆಗೆ ಆಹ್ಲಾದಕರವಾದ ವಿಶೇಷವಾದಂತಹ ಕಾಫಿ ನೀವು ಒಮ್ಮೆ ಪ್ರಯತ್ನಿಸಿ ನೋಡಿ.

CAPPUCCINO COFFEE 2

ಬೇಕಾಗುವ ಸಾಮಗ್ರಿಗಳು:
* ಕಾಫಿ ಪೌಡರ್- 6 ಚಮಚ
* ಸಕ್ಕರೆ- 4 ಚಮಚ
* ಬಿಸಿ ನೀರು- ಅರ್ಧ ಕಪ್
* ಹಾಲು- ಅರ್ಧ ಕಪ್

ಮಾಡುವ ವಿಧಾನ:
* ಒಂದು ಬೌಲ್‍ಗೆ ಕಾಫಿ ಪೌಡರ್, ಸಕ್ಕರೆ, ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನೂ ಓದಿ:  ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ

* ಗಟ್ಟಿಯಾದ ಕ್ರೀಮ್ ಹದಕ್ಕೆ ಬರುವವರೆಗೆ ಮಿಶ್ರಣವನ್ನು ಮಾಡಿಕೊಳ್ಳಬೇಕು.

CAPPUCCINO COFFEE

* ನಂತರ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿಳ್ಳಬೇಕು. ಇದನ್ನೂ ಓದಿ: ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ

* ನಂತರ ಕಾಫಿ ಕಪ್‍ಗೆ ಈಗಾಗಲೇ ತಯಾರಿಸಿದ ಕ್ರೀಮ್ ಹಾಗೂ ಹಾಲನ್ನು ಹಾಕಿ ಸ್ವಲ್ಪ ಮಿಶ್ರಣ ಮಾಡಿಕೊಂಡರೆ ರುಚಿಯಾದ ಕಾಫಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

Share This Article
Leave a Comment

Leave a Reply

Your email address will not be published. Required fields are marked *