ಭೋಪಾಲ್: ಆಸ್ಪತ್ರೆ ಸಿಬ್ಬಂದಿಗೆ ಲಂಚ ಕೊಡಲು ವಿಫಲರಾದ ಪರಿಣಾಮ ಮಹಿಳೆಯೊಬ್ಬರು ಮೃತ ಶಿಶುವಿಗೆ ರಸ್ತೆಯಲ್ಲೇ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಭಿಂಡ್‌ನ ಜಿಲ್ಲಾಸ್ಪತ್ರೆ ಬಳಿ ನಡೆದಿದೆ. ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ತನಿಖಾ ಸಮಿತಿಯನ್ನು ರಚಿಸಿದೆ.
ಭಿಂಡ್‌ನ ರಾಜುಪುರ ಗ್ರಾಮದ ನಿವಾಸಿ ಆರು ತಿಂಗಳ ಗರ್ಭಿಣಿ ಕಲ್ಲೋ ಅವರು ತಡರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ತಕ್ಷಣ ಪತಿ ಹಾಗೂ ಪತ್ತೆ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ 5,000 ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಹಣವಿಲ್ಲ ಎಂದು ಹೇಳಿದಾಗ, ಬೇರೆ ಕಡೆ ಅಲ್ಟ್ರಾಸೌಂಡ್ ಮಾಡಿಸುವಂತೆ ಕುಟುಂಬದವರಿಗೆ ಸಿಬ್ಬಂದಿ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಕೂಡಲೇ ಮಗು ಜನಿಸಿತ್ತು. ಆದರೆ ಶಿಶು ಮೃತಪಟ್ಟಿತ್ತು. ಇದನ್ನೂ ಓದಿ: ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಭ್ಯ
ನಾವು ಭಿಂಡ್ ಜಿಲ್ಲಾಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ಶುಶ್ರೂಷಾಧಿಕಾರಿಗಳು ನನ್ನ ಸೊಸೆಗೆ ವೈದ್ಯಕೀಯ ಚಿಕಿತ್ಸೆ ಪ್ರಾರಂಭಿಸುವ ಮೊದಲು ನಮ್ಮಿಂದ 5,000 ಲಂಚ ಕೇಳಿದರು. ನಾವು ಬಡವರು, ಹಣ ಇಲ್ಲ ಎಂದು ಹೇಳಿದಾಗ, ಸಿಬ್ಬಂದಿ ನಮ್ಮೆಲ್ಲರನ್ನು ಆಸ್ಪತ್ರೆಯಿಂದ ಹೊರಹಾಕಿದರು. ಆಸ್ಪತ್ರೆಯ ಹೊರಗೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸುವಂತೆ ಹೇಳಿದ್ದರು ಎಂದು ಮಹಿಳೆ ಅತ್ತೆ ಮಿಥಿಲೇಶ್ ಮಿರ್ಧಾ ಆರೋಪಿಸಿದ್ದಾರೆ.
ಮಗುವಿಗೆ ಹೊದಿಸಲು ಸ್ವಚ್ಛವಾದ ಬಟ್ಟೆಯೂ ಇಲ್ಲದ ಕಾರಣ, ಮಗುವಿನ ತಂದೆಯ ಟವೆಲ್ ಅನ್ನೇ ಬಳಸಲಾಯಿತು ಎಂದು ಮಿರ್ಧಾ ತಿಳಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಭ್ರೂಣವು ಗರ್ಭಾಶಯದೊಳಗೆ ಸಾವನ್ನಪ್ಪಿದೆ. ರೋಗಿಯ ಸಂಬಂಧಿಕರಿಗೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ರೋಗಿಯ ಸಂಬಂಧಿಕರು ತೃಪ್ತರಾಗದೇ ಆಸ್ಪತ್ರೆಯಿಂದ ಹೊರಟಿದ್ದರು. ಯಾರೂ ಅವರನ್ನು ಆಸ್ಪತ್ರೆಯಿಂದ ಹೊರದೂಡಿಲ್ಲ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಅನಿಲ್ ಗೋಯಲ್ ತಿಳಿಸಿದ್ದಾರೆ.