ಮದ್ವೆಯಾಗಲು ಡ್ರಗ್ ಆರೋಪಿಗೆ ಮುಂಬೈಯಿಂದ ಹೈದರಾಬಾದ್ ಹೋಗಲು ಕೋರ್ಟ್ ಅನುಮತಿ

Public TV
2 Min Read
marriage

ಮುಂಬೈ: ಡ್ರಗ್ ಆರೋಪಿಯೋರ್ವನಿಗೆ ಮದುವೆ ಮಾಡಿಕೊಳ್ಳಲು ಮುಂಬೈಯಿಂದ ಹೈದರಾಬಾದ್ ಗೆ ಹೋಗಲು ಕೋರ್ಟ್ ಅನುಮತಿ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಡ್ರಗ್ ಆರೋಪಿ ಕೋರ್ಟ್ ಗೆ ತನ್ನ ಮದುವೆ ಆಮಂತ್ರಣದ ಜೊತೆಗೆ, ನನ್ನ ಮದುವೆ ಹೈದರಾಬಾದ್ ನಲ್ಲಿದೆ. ಒಂದು ವಾರ ನನ್ನ ಮದುವೆಗೆ ಮುಂಬೈಯಿಂದ ಹೈದರಾಬಾದ್ ಗೆ ಹೋಗಲು ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದಾನೆ. ಈ ಸಂಬಂಧ ನ್ಯಾಯಾಲಯವು, ಮದುವೆಯ ಕಾರ್ಡ್‍ಗಳನ್ನು ಈಗಾಗಲೇ ಮುದ್ರಿಸಿ, ನಂತರ ನ್ಯಾಯಾಲಯದ ಅನುಮತಿ ಕೇಳುತ್ತಿರುವುದು ಅವಹೇಳನ ಕೃತ್ಯವಾಗಿದೆ. ಆದರೆ ಆರೋಪಿ ಮದುವೆಯಾಗಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಷರತ್ತುಗಳೊಂದಿಗೆ ಮನವಿಯನ್ನು ಅನುಮತಿಸುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಕೆಸರೆಚಿದವನ ಕೈಯಲ್ಲೇ ಪ್ಯಾಂಟ್ ಕ್ಲೀನ್ ಮಾಡಿಸಿ ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್

court

ಯಾರಿದು?
ಆರೋಪಿ ಆರಿಫ್ ಖಾನ್ ವಿರುದ್ಧ ಮುಂಬೈ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟಾನ್ಸ್(ಎನ್‍ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‍ನಲ್ಲಿ ಆತನಿಗೆ ಜಾಮೀನು ಸಹ ನೀಡಲಾಗಿತ್ತು. ಆದರೆ ಆರಿಫ್ ಖಾನ್‍ಗೆ ಕೆಲವು ಷರತ್ತುಗಳು ವಿಧಿಸಲಾಗಿತ್ತು. ಈ ಪ್ರಕರಣ ಆರೋಪಿ ಪ್ರಕರಣದ ಬಗ್ಗೆ ಪೂರ್ತಿ ಚಿತ್ರಣ ಸಿಗುವವರೆಗೂ ಯಾವುದೇ ಕಾರಣಕ್ಕೂ ನಗರ ಬಿಟ್ಟು ಹೋಗುವಂತಿಲ್ಲ ಎಂದು ತಿಳಿಸಲಾಗಿತ್ತು.

ಆರಿಫ್ ಖಾನ್‍ಗೆ ಮದುವೆ ಫಿಕ್ಸ್ ಆಗಿದ್ದು, ಮದುವೆ ಹೈದರಾಬಾದ್ ನಲ್ಲಿತ್ತು. ಈ ಸಂಬಂಧ ಆರಿಫ್ ಖಾನ್ ಒಂದು ವಾರ ಮುಂಬೈಯಿಂದ ತನ್ನ ಮದುವೆಗಾಗಿ ಹೈದರಾಬಾದ್‍ಗೆ ಪ್ರಯಾಣಿಸಲು ಅನುಮತಿ ಕೋರಿ ಮನವಿ ಸಲ್ಲಿಸಿದರು. ಈ ವೇಳೆ ಆತ ಅರ್ಜಿಯೊಂದಿಗೆ ಮದುವೆಯ ಆಮಂತ್ರಣ ಪತ್ರವನ್ನು ಲಗತ್ತಿಸಿರುವುದು ಸ್ಪಷ್ಟವಾಗಿದೆ.

POLICE JEEP

ಈ ಅರ್ಜಿ ನೋಡಿದ ನ್ಯಾಯಾಲಯ ಮದುವೆ ಕಾರ್ಡ್ ಮೊದಲೇ ಮುದ್ರಿಸಿ ನಂತರ ನ್ಯಾಯಾಲಯಕ್ಕೆ ಅರ್ಜಿ ಅಲ್ಲಿಸಿರುವುದು ಅತ್ಯಂತ ಅವಹೇಳನ ಕೃತ್ಯ. ಮದುವೆಯ ಕಾರ್ಡ್‍ಗಳನ್ನು ಈಗಾಗಲೇ ಮುದ್ರಿಸಿ, ನ್ಯಾಯಾಲಯವು ತನ್ನ ಅರ್ಜಿಯನ್ನು ಅಗತ್ಯವಾಗಿ ಅನುಮತಿಸುತ್ತದೆ ಎಂದು ಅರ್ಜಿದಾರನು ಹೇಗೆ ಭಾವಿಸಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆಯ ಸದ್ಬುದ್ಧಿ ಕೊಡಲಿ: ಪ್ರೀತಂಗೌಡ 

ಆರೋಪಿಯ ಈ ಕೃತ್ಯವನ್ನು ‘ಅತ್ಯಂತ ಅವಹೇಳನವಾಗಿದೆ’ ಆದರೆ ಅವನು ಮದುವೆಯಾಗಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಷರತ್ತುಗಳೊಂದಿಗೆ ಅವನ ಮನವಿಯನ್ನು ಅನುಮತಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *