12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral

Public TV
2 Min Read
Indian woman

ಭಾರತೀಯ ಮಹಿಳೆಯೊಬ್ಬಳು 12,000 ಕೆಜಿ ತೂಕದ ಬಸ್ಸನ್ನು ಕೂದಲಿನ ಸಹಾಯದಿಂದ ಎಳೆದುಕೊಂಡು ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಈ ವೀಡಿಯೋ ಇದೀಗ ವೈರಲ್‌ ಆಗಿದೆ.

ಆಶಾ ರಾಣಿ ಗಿನ್ನಿಸ್ ದಾಖಲೆಗೆ ಪಾತ್ರವಾದ ಮಹಿಳೆಯಾಗಿದ್ದಾರೆ. ಇವರ ಹೆಸರು ಭಾರತದಲ್ಲಿ ಅಷ್ಟೋಂದು ಜನಪ್ರಿಯವಾಗಿಲ್ಲದಿರಬಹುದು. ಆದರೆ ಶಕ್ತಿ ಮತ್ತು ಸಾಹಸ ಪ್ರದರ್ಶನದಲ್ಲಿ ಇವರು ಉತ್ತಮವಾದ ಹೆಸರನ್ನು ಮಾಡಿದ್ದಾರೆ. ಇವರು 2016ರಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದರು. ತನ್ನ ಕೂದಲಿನಿಂದ 12,000 ತೂಕದ ಬಸ್ ಎಳೆದುಕೊಂಡು ಗಿನ್ನಿಸ್ ದಾಖಲೆ ಮಾಡಿರುವ ಇವರ ಹೆಸರಿನಲ್ಲಿ ಅನೇಕ ದಖಲೆಗಳು ಇವೆ. ಆದರೆ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO

Indian woman 2

ಆಶಾ ರಾಣಿ 2016 ರಲ್ಲಿ 12,216 ಕೆಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ತನ್ನ ಕೂದಲನ್ನು ಬಳಸಿ ಎಳೆದಿದ್ದರು. ಇದು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿತ್ತು.  ಆಶಾ ಐರನ್ ಕ್ವೀನ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

ವೈರಲ್ ವೀಡಿಯೋದಲ್ಲಿ ಏನಿದೆ?: ಆಶಾ ರಾಣಿ, ಕೆಂಪು ಮತ್ತು ಬೂದು ಬಣ್ಣದ ಡಬಲ್ ಡೆಕ್ಕರ್ ಬಸ್‍ನ್ನು ಹಗ್ಗದ ಸಹಾಯದಿಂದ ಅವರ ತಲೆ ಕೂದಲಿಗೆ ಬಿಗಿಯಾಗಿ ಕಟ್ಟಲಾಗಿತ್ತು. ಹಿಮ್ಮುಖವಾಗಿ ನಿಂತು ಹಿಂದೆ ಹೆಜ್ಜೆ ಹಾಕುತ್ತಿದ್ದಂತೆ, ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತದೆ, ನಂತರ ಅವರ ಈ ಶಕ್ತಿ ಪ್ರದರ್ಶನ ಗಿನ್ನಸ್ ರೆಕಾರ್ಡ್‍ನಲ್ಲಿ ದಾಖಲಾಗಿರುವುದುನ್ನು ನಾವು ಈ ವೈರಲ್ ವೀಡಿಯೋದಲ್ಲಿ ನೋಡಬಹುದಾಗಿದೆ.

Indian woman 1

ಆಶಾ ರಾಣಿ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. 2014ರಲ್ಲಿ  Eye Socketನಿಂದ 15.15 ಕೆಜಿ ತೂಕವನ್ನು ಎತ್ತಿ  ಗಿನ್ನಿಸ್ ರೆಕಾರ್ಡ್ ಮಾಡಿದ್ದರು. 2 ವರ್ಷಗಳ ಹಿಂದೆ ತನ್ನ ಕಿವಿಗಳನ್ನು ಬಳಸಿ 1,700 ಕೆಜಿ ತೂಕದ ವ್ಯಾನ್ ಎಳೆದಿದ್ದರು. ಹಲ್ಲಿಗಳ ಸಹಾಯದಿಂದ ವಾಹನವನ್ನು ಕೇವಲ 22.16 ಸೆಕೆಂಡ್‍ಗಳಲ್ಲಿ 25 ಮೀಟರ್ ಎಳೆದುಕೊಂಡು ಹೋಗುವ ಮೂಲವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *