ಲಕ್ನೋ: ಫೋನ್ ಕದ್ದಳೆಂದು ಬಾಲಕಿಯನ್ನು ಅಂಗಡಿ ಮಾಲೀಕನ ಮನೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಅಮೇಥಿಯ ರಾಯ್‌ಪುರ ಫುಲ್ವಾರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸೂರಜ್ ಸೋನಿ ಅವರ ಮೊಬೈಲ್ ಅಂಗಡಿಯಿಂದ ಅಪ್ರಾಪ್ತೆ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಈ ವಿಷಯ ತಿಳಿದ ಮಾಲೀಕ ಸೋನಿ, ಇದನ್ನು ಪೊಲೀಸರ ಗಮನಕ್ಕೆ ತರುವ ಬದಲು, ಆತನ ಸ್ನೇಹಿತನ ಜೊತೆ ಸೇರಿ ಬಾಲಕಿಯನ್ನು ಹಿಡಿದು ಸೋನಿಯ ಮನೆಗೆ ಕರೆದೊಯ್ದು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ ಆಕೆಯ ಕೂದಲು ಹಿಡಿದು ಎಳೆದಾಡಿದ್ದಾರೆ. ಯುವಕನೊಬ್ಬ ಕೋಲು ಹಿಡಿದು ಬಾಲಕಿಯನ್ನು ನೆಲದ ಮೇಲೆ ಮಲಗಿಸಿ, ಅವಳ ಕಾಲುಗಳ ಮೇಲೆ ಬೀಸುತ್ತಾರೆ. ಇದನ್ನೂ ಓದಿ: ತಾಯಿ ಮೇಲೆ ಹಲ್ಲೆ ಮಾಡಿದನೆಂದು ಸಂಬಂಧಿಯನ್ನೇ ಕೊಂದ ಬಾಲಕಿಯರು!
- Advertisement 2-
- Advertisement 3-
ಅಮೇಥಿ ಪಟ್ಟಣದ ನಿವಾಸಿ ಸೂರಜ್ ಸೋನಿ ಶಿವಂ ಅಲಿಯಾಸ್ ಶಕಲ್ ಮತ್ತು ಕೆಲವು ಜನರು ಅಪ್ರಾಪ್ತೆಯನ್ನು ಥಳಿಸಿದ ದೃಶ್ಯ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಅವರ ಗುರುತುಗಳನ್ನು ಪರಿಶೀಲಿಸಲಾಗುತ್ತಿದೆ. ತಕ್ಷಣವೇ ನಾವು ಬಾಲಕಿ ಮತ್ತು ಆಕೆಯ ತಂದೆಯನ್ನು ಸಂಪರ್ಕಿಸಿ ಈ ಸಂಬಂಧ ಅಮೇಥಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ಅರ್ಪಿತ್ ಕಪೂರ್ ಹೇಳಿದ್ದಾರೆ.
- Advertisement 4-
ತಮ್ಮ ಮೇಲೆ ದೂರು ದಾಖಲಾಗಿರುವ ವಿಚಾರ ತಿಳಿದ ಯುವಕರು ಪರಾರಿಯಾಗಿದ್ದಾರೆ. ಪೊಲೀಸರು ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‍ನಲ್ಲಿ ಪೆಟ್ರೋಲ್ ದರ 25 ರೂ. ಇಳಿಕೆ – ದ್ವಿಚಕ್ರ ವಾಹನಗಳಿಗೆ ಮಾತ್ರ ಈ ಆಫರ್!