ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

Public TV
1 Min Read
OMICRON

ವಾಷಿಂಗ್ಟನ್‌: ಜಗತ್ತಿನಲ್ಲಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ ರೂಪಾಂತರಿ ಹೊಸ ತಳಿ ಓಮಿಕ್ರಾನ್‌ ಬಗ್ಗೆ ಜನತೆಗೆ ಗುಡ್‌ ನ್ಯೂಸ್‌ವೊಂದು ಸಿಕ್ಕಿದೆ. ಓಮಿಕ್ರಾನ್‌ ತೀವ್ರತೆ ಬಗ್ಗೆ ಬ್ರಿಟನ್‌ ಹಾಗೂ ದಕ್ಷಿಣ ಆಫ್ರಿಕಾದ ವಿವಿಧ ಅಧ್ಯಯನಗಳ ವರದಿಗಳನ್ನು ಬಹಿರಂಗಪಡಿಸಲಾಗಿದೆ.

ಓಮಿಕ್ರಾನ್‌ ತೀವ್ರತೆ ಸೌಮ್ಯವಾಗಿರಲಿದೆ. ಡೆಲ್ಟಾ ಥಳಿಯಷ್ಟು ತೀವ್ರತೆ ಹೊಂದಿಲ್ಲ. ವಯಸ್ಸಾದ 100 ಮಂದಿಯಲ್ಲಿ ಮೂವರಿಗೆ ಈ ಸೋಂಕಿನ ತೀವ್ರತೆ ಕಾಡಬಹುದಷ್ಟೆ. ಶೇ.70ರಿಂದ 80 ಜನರಿಗೆ ಸೋಂಕು ತಗುಲಿದರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಮಾತ್ರ ಶೇ.47ರಷ್ಟು ಆಗಿರುತ್ತದೆ ಎಂಬ ವಿಚಾರ ಸ್ಕಾಟ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಪ್ರಾಥಮಿಕ ವರದಿಯಲ್ಲಿ ಸಾಬೀತಾಗಿದೆ. ಇದನ್ನೂ ಓದಿ: ದೇಶದಲ್ಲಿ 200ರ ಗಡಿದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ಮೋದಿ ಗುರುವಾರ ಮಹತ್ವದ ಸಭೆ

CORONA 3 1

ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್‌ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಮೂರನೇ ಎರಡರಷ್ಟು ಭಾಗ ಕಡಿಮೆಯಾಗಲಿದೆ. ಅಷ್ಟೇ ಅಲ್ಲ ಬೂಸ್ಟರ್‌ ಡೋಸ್‌ ಲಸಿಕೆಯು ಸೋಂಕಿನ ವಿರುದ್ಧ ಹೋರಾಡುವಲ್ಲಿ ಗಣನೀಯ ಪಾತ್ರ ನಿರ್ವಹಿಸಲಿದೆ ಎಂದು ಸಹ ಅಧ್ಯಯನ ತಿಳಿಸಿದೆ.

ಸ್ಕಾಟ್ಲೆಂಡಿನ ನ್ಯಾಷನಲ್‌ ಕೋವಿಡ್‌ ಇನ್ಸಿಡೆಂಟ್‌ ಸಂಸ್ಥೆಯು ಯೂರೋಪ್‌ನಲ್ಲಿ ಈವರೆಗೂ ವರದಿಯಾಗಿರುವ ಓಮಿಕ್ರಾನ್‌ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿದೆ. ಓಮಿಕ್ರಾನ್‌ ವ್ಯಾಪಕವಾಗಿ ಹರಡಬಹುದು, ಆದರೆ ಮಾನವನ ಆರೋಗ್ಯದ ಮೇಲೆ ಡೆಲ್ಟಾ ತಳಿಯಷ್ಟು ತೀವ್ರತೆ ಬೀರುವುದಿಲ್ಲ. ಓಮಿಕ್ರಾನ್‌ನಿಂದ ಮಾನವನ ಆರೋಗ್ಯದ ಮೇಲೆ ಹೆಚ್ಚು ತೀವ್ರತೆ ಉಂಟಾಗಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಬ್ರಹ್ಮಾಂಡದ ಸೃಷ್ಟಿ ರಹಸ್ಯ ಅರಿಯಲು ಟೈಮ್ ಮಷಿನ್ – ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ವಿಶೇಷತೆ ಏನು?

CORONA

ಜಗತ್ತಿನ ಶೇ.70ರಿಂದ 80ರಷ್ಟು ಜನರಿಗೆ ಬಾಧಿಸಬಹುದು. ಆದರೆ ತೀವ್ರತೆ ಶೇ.3ಕ್ಕಿಂತ ಕಡಿಮೆ ಇರಲಿದೆ ಎಂದು ದಕ್ಷಿಣ ಆಫ್ರಿಕಾದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಮ್ಯುನಿಕೆಬಲ್‌ ಡಿಸೀಸ್‌ ಸಂಸ್ಥೆಯ ಪ್ರೊ.ಚರ್ಲಿ ಚೋಹೆನ್‌ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *