ಹಾವೇರಿ: ದೂರು ನೀಡಲು ಬಂದ ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡುತ್ತಿದ್ದ ಹಾವೇರಿಯ ಸಿಪಿಐ ಅನ್ನು ಅಮಾನತು ಮಾಡಲಾಗಿದೆ.
ಮಹಿಳಾ ಪೊಲೀಸ್ ಠಾಣೆ ಸಿಪಿಐ ಚಿದಾನಂದ ದೂರು ನೀಡಲು ಬರುವ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವುದು ಅಲ್ಲದೇ ಅವರ ಜೊತೆಗೆ ವೀಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನು. ಪ್ರಸ್ತುತ ಆ ವೀಡಿಯೋಗಳು ಸಹ ವೈರಲ್ ಆಗಿದೆ. ಇದನ್ನೂ ಓದಿ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 13 ಮಂದಿಗೆ 20 ವರ್ಷ ಜೈಲು
ಠಾಣೆಗೆ ಬಂದ ಮಹಿಳೆಯರ ನಂಬರ್ ತೆಗೆದುಕೊಂಡು ಅವರಿಗೆ ಚಿದಾನಂದ ಬಾತ್ ರೂಂನಲ್ಲಿದ್ದಾಗ ವೀಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದನು. ಮಹಿಳೆಯರ ಜೊತೆಗೆ ಫೋನ್ ನಲ್ಲಿ ಕೆಟ್ಟದಾಗಿ ಮಾತನಾಡಿದ್ದು, ಓರ್ವ ಮಹಿಳೆಗೆ ಮಂಚಕ್ಕೆ ಕರೆದಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಈ ಹಿನ್ನೆಲೆ ಈತನ ವಿರುದ್ಧ ಎಸ್‍ಪಿ, ಪೂರ್ವ ವಲಯ ಐಜಿಪಿ ರವಿ.ಎಸ್ ಸೇರಿದಂತೆ ಹಲವರಿಗೆ ಮಹಿಳೆಯರು ದೂರು ನೀಡಿದ್ದು, ಅವರ ದೂರನ್ನು ಆಧರಿಸಿ ಪೂರ್ವ ವಲಯ ಐಜಿಪಿ ಹಾಗೂ ಅಧಿಕಾರಿಗಳು ಚಿದಾನಂದ ಬಗ್ಗೆ ತನಿಖೆ ಮಾಡಿದ್ದಾರೆ. ನಂತರ ಆತನನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಚಾರ್ಜಿಂಗ್ ವೇಳೆ ಸ್ಫೋಟ- ಓರ್ವ ಸಾವು, ನಾಲ್ವರು ಗಂಭೀರ